ಸಿದ್ದಾಪುರ : ತಾಲೂಕಿನ ಕಾಂಗ್ರೆಸ್ ಪ್ರಮುಖ ಮುಖಂಡರು ಹಾಗೂ ಶಾಸಕ ಭೀಮಣ್ಣ ನಾಯ್ಕ್ ರವರ ಆಪ್ತರು ಎನಿಸಿಕೊಂಡಿರುವವರಿಗೆ ಸಂಬಂಧಪಟ್ಟ ಕೊರಲ್ ಕೈ ಗ್ರಾಮ ಪಂಚಾಯತ್ ಹೋಂಸ್ಟೇ ಗೆ ಹೊಂದಿಕೊಂಡ ಕ್ಲಬ್ ನಲ್ಲಿ ನಿಯಮ ಗಾಳಿಗೆ ತೂರಿ ಇಸ್ಪೀಟ್ ದಂಧೆ ನಡೆಯುತ್ತಿರುವಾಗ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ರವರು ದಾಳಿ ನಡೆಸಿ ಆಟದಲ್ಲಿ ತೊಡಗಿಕೊಂಡಿದ್ದವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಆಟದಲ್ಲಿ ತೊಡಗಿಕೊಂಡಿರುವ ಹಾಗೂ ನಡೆಸುತ್ತಿರುವವರ ಮೇಲೆ ಕಾನೂನು ರೀತಿಯ ಕ್ರಮಗಳು ಆಗಬೇಕು ಎಂದು ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ ಅವರು ಆಗ್ರಹ ಮಾಡಿದರು ಸಿದ್ದಾಪುರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು..
ಗ್ರಾಮ ಪಂಚಾಯತ್ ಪಿಡಿಒ ತಹಶೀಲ್ದಾರ್ ಸಿಪಿಐ ರವರು ಏನು ಮಾಡುತ್ತಿದ್ದಾರೆ ಎಷ್ಟು ಕಡೆ ಭೇಟಿ ಕೊಟ್ಟಿದ್ದಾರೆ ಅಲ್ಲಿ ಏನು ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಬೇಕಲ್ಲವೇ ಶಾಸಕರು ಯಾಕೆ ಸುಮ್ಮನಿದ್ದಾರೆ ಇವರೆಲ್ಲರೂ ಹಾಗೂ ಇಲ್ಲಿ ಫ್ಲೆಕ್ಸ್ ಹಾಕಿದವರಲ್ಲಿ ಎಲ್ಲರೂ ಇದೇ ದಂದೆಯಲ್ಲಿ ಮುಳುಗಿರುವವರು.
ಹೋಂಸ್ಟೇ ಅನುಮತಿ ಪಡೆಯುವಾಗ ಮಾಲಕರು ಮೇಲೆ ಕ್ರಿಮಿನಲ್ಪ್ ಪ್ರಕರಣ ಇರಬಾರದು ಎಂದಿದೆ, ಈ ಮಾಲಕರು ಕ್ರಿಮಿನಲ್ ಪ್ರಕರಣದಲ್ಲಿ ಒಳಪಟ್ಟವರು ಇವರಿಗೆ ಹೇಗೆ ಪರವಾನಿಗೆ ನೀಡಲಾಯಿತು.
ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿ ಎಷ್ಟು ಜಾಗ ಒತ್ತೂರಿಯಾಗಿದೆ ಎಂದು ಪರಿಶೀಲನೆ ನಡೆಸಬೇಕು. ಪ್ರಕರಣದಲ್ಲಿರುವವರ ಮೇಲೆ ಸೂಕ್ತ ರೀತಿಯ ತನಿಖೆಯಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ್ ಮಾತನಾಡಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಅನಧಿಕೃತ ಹೋಂ ಸ್ಟೇ ಗಳು ಹಾಗೂ ಅನೈತಿಕ ಚಟುವಟಿಕೆ ಹೆಚ್ಚಾಗಿವೆ, ಅಕ್ರಮ ಸರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇತ್ತೀಚೆಗೆ ಹಲಗೇರಿಯಲ್ಲಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಲಾಗಿದೆ ಅವರ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ತಾಲೂಕಿನಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸಿದಂತೆ ಕ್ರಮವಾಗಬೇಕು ಎಂದು ಒತ್ತಾಯಿಸಿದರು . ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿನಯ್ ಕುಮಾರ್ ಮಂಜುನಾಥ ಭಟ್ ಜಿಕೆ ನಾಯ್ಕ್ ಕೃಷ್ಣಮೂರ್ತಿ ಐಸೂರ್ , ಸುರೇಶ ನಾಯ್ಕ್ ಬಾಲಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/06/2026 02:58 pm