ಸಿದ್ದಾಪುರ : ನಾಮಧಾರಿ ಸಮುದಾಯದ ಯುವ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ವಸಂತ ನಾಯ್ಕ್ ಅವರನ್ನು ಬಿಜೆಪಿ ಸಿದ್ದಾಪುರ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ ಅವರು ವೈಯಕ್ತಿಕವಾಗಿ ತೇಜೋವದೆ ಮಾಡುತ್ತಿರುವುದನ್ನು ಇಡೀ ಸಮಾಜವು ಖಂಡಿತ ಅವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿ ಎಸ್ ಏನ್ ಡಿ ಪಿ ಹಾಗೂ ರಾಷ್ಟ್ರೀಯ ಈಡಿಗ ಮಹಾಮಂಡಳಿ ನಾಮಧಾರಿ ಸಮಾಜದ ಮುಖಂಡರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸಿದ್ದಾಪುರ ಇನ್ಸ್ಪೆಕ್ಟರ್ ರವರಿಗೆ ಮನವಿ ನೀಡಿದರು.
ಬಿಎಸ್ ಏನ್ ಡಿ ಪಿ ಜಿಲ್ಲಾ ಉಪಾಧ್ಯಕ್ಷ ವಿನಾಯಕ ದೊಡಗದ್ದೆ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಧಿಕ್ಕಾರ ಧಿಕ್ಕಾರ ತಿಮ್ಮಪ್ಪ ಮಡಿವಾಳ್ ಅವರಿಗೆ ಧಿಕ್ಕಾರ ಎನ್ನುವ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ಸಾಗಿ ಆಕ್ರೋಶ ಹೊರ ಹಾಕಿದರು.
Kshetra Samachara
12/06/2026 04:19 pm
LOADING...