ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ತೆಲಂಗಾಣದಲ್ಲಿ ಮಾನವ-ಪ್ರಾಣಿ ಬಾಂಧವ್ಯ - ದೋಸೆ ತಿನ್ನಲು ಪ್ರತಿದಿನ ಬರುವ ಗೂಳಿ!

ತೆಲಂಗಾಣದ ಒಂದು ಸಣ್ಣ ಪಟ್ಟಣದಲ್ಲಿ, ಮಾನವ-ಪ್ರಾಣಿ ನಡುವಿನ ಅನನ್ಯ ಸ್ನೇಹವೊಂದು ಎಲ್ಲರ ಗಮನ ಸೆಳೆದಿದೆ. ಪ್ರತಿದಿನ ಬೆಳಿಗ್ಗೆ ನಿಗದಿತ ಸಮಯಕ್ಕೆ ಗೂಳಿ ಒಂದು ಸ್ಥಳೀಯ ದೋಸೆ ಅಂಗಡಿಯೊಂದಕ್ಕೆ ದನನಿತ್ಯ ಉಪಹಾರಕ್ಕಾಗಿ ಬರುತ್ತೆ..

ದೋಸೆ ಅಂಗಡಿ ಮಾಲೀಕನು ಈ ಗೂಳಿಯ ಆಪ್ತ ಸ್ನೇಹಿತನಾಗಿದ್ದಾನೆ. ಗೂಳಿ ಬಂದ ಕೂಡಲೇ, ಮಾಲೀಕನು ಯಾವುದೇ ಮಸಾಲೆ ಇಲ್ಲದ, ಆಲೂಗಡ್ಡೆ ತುಂಬಿದ ಎರಡು ಸ್ಪೆಷಲ್ ದೋಸೆಗಳನ್ನು ಅದಕ್ಕಾಗಿ ರೆಡಿ ಮಾಡ್ತಾರೆ, ದೋಸೆ ರೆಡಿಯಾಗುವರೆಗೂ ಅಲ್ಲೆ ತಾಳ್ಮೆಯಿಂದ ನಿಲ್ಲುವ ಗೂಳಿ, ತದನಂತರ

ಮಾಲೀಕ ದೋಸೆಗಳನ್ನು ಆರಿಸಿ,ತನ್ನ ಪ್ರೀತಿಯ ಸ್ನೇಹಿತನಿಗೆ ಪ್ರೀತಿಯಿಂದ ಉಣಬಡಿಸುತ್ತಾನೆ.

ಈ ಪ್ರಾಣಿ ಸ್ನೇಹ ಮತ್ತು ದೈನಂದಿನ ಉಪಹಾರದ ದಿನಚರಿ ಹಲವು ವರ್ಷಗಳಿಂದ ಮುಂದುವರಿದಿದೆ. ಸದ್ಯ ಈ ಮಾನವ-ಪ್ರಾಣಿ ಭಾಂದವ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

Edited By : Abhishek Kamoji
PublicNext

PublicNext

27/05/2026 05:41 pm

Cinque Terre

4.29 K

Cinque Terre

0

ಸಂಬಂಧಿತ ಸುದ್ದಿ