ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬರೋಬ್ಬರಿ 45 ಕೆಜಿ ತೂಕ ಇಳಿಸುವ ಮುನ್ನ ಸಾರಾ ಅಲಿ ಖಾನ್ ಡಯೆಟ್ ಹೇಗಿತ್ತು ಗೊತ್ತಾ? ಇಲ್ಲಿದೆ ನಟಿಯ ತಮಾಷೆಯ ಕಥೆ!

ಬೆಂಗಳೂರು : ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಫಿಟ್ನೆಸ್ ಮತ್ತು ಶಿಸ್ತಿನ ಜೀವನಶೈಲಿಯನ್ನು ಕಂಡು ಲಕ್ಷಾಂತರ ಜನರು ಫಿದಾ ಆಗಿದ್ದಾರೆ. ಆದರೆ, ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಸಾರಾ ಅವರ ಲೈಫ್‌ಸ್ಟೈಲ್ ಸಂಪೂರ್ಣ ವಿಭಿನ್ನವಾಗಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಸಾರಾ, ತಾವು ನ್ಯೂಯಾರ್ಕ್‌ನಲ್ಲಿ ಕಾಲೇಜು ಓದುತ್ತಿದ್ದ ದಿನಗಳಲ್ಲಿ ತೂಕ ಹೆಚ್ಚಾಗಲು ಕಾರಣವಾದ ತಮ್ಮ ಆಹಾರದ ಅಭ್ಯಾಸಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬಾಲಿವುಡ್‌ಗೆ ಎಂಟ್ರಿ ಕೊಡುವ ಮುನ್ನ ಸಾರಾ ಅಲಿ ಖಾನ್ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಅದಕ್ಕೂ ಮುನ್ನ ಅವರ ದಿನಚರಿ ಬರೀ ಪಿಜ್ಜಾ, ಬ್ರೌನಿ ಮತ್ತು ಜಂಕ್ ಫುಡ್‌ಗಳಿಂದಲೇ ತುಂಬಿತ್ತಂತೆ.

'ಕರ್ಲಿ ಟೇಲ್ಸ್' ಜೊತೆಗಿನ ಸಂದರ್ಶನದಲ್ಲಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡ ಸಾರಾ, "ನಾನು ನ್ಯೂಯಾರ್ಕ್‌ನಲ್ಲಿದ್ದಾಗ ದಿನಕ್ಕೆ ಎರಡು ಮೀಡಿಯಂ ಸೈಜ್ ಪಿಜ್ಜಾಗಳನ್ನು ತಿನ್ನುತ್ತಿದ್ದೆ. ಅಷ್ಟೇ ಅಲ್ಲ, ಬೆಳಗ್ಗಿನ ಉಪಹಾರಕ್ಕೆ (Breakfast) ಮೂರು ಚಾಕೊಲೇಟ್ ಚಿಪ್ ಬ್ರೌನಿಗಳನ್ನು ಖಾಲಿ ಮಾಡುತ್ತಿದ್ದೆ" ಎಂದು ತಮ್ಮ ಅಂದಿನ ಅನ್-ಹೆಲ್ದೀ ಡಯೆಟ್ ಬಗ್ಗೆ ಹೇಳಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ದಿನಾ ಎರಡು ಪಿಜ್ಜಾ ಆರ್ಡರ್ ಮಾಡುತ್ತಿದ್ದರ ಹಿಂದೆ ಒಂದು ತಮಾಷೆಯ ಲಾಜಿಕ್ ಇತ್ತಂತೆ. ಅದೇನೆಂದರೆ, ಅಲ್ಲಿ ಸಿಗುತ್ತಿದ್ದ ಕಾಂಬೊ ಆಫರ್‌ಗಳು ಮತ್ತು ಡಿಸ್ಕೌಂಟ್‌ಗಳು. ಒಂದು ಲಾರ್ಜ್ ಪಿಜ್ಜಾ ಖರೀದಿಸುವುದಕ್ಕಿಂತ, ಎರಡು ಮೀಡಿಯಂ ಪಿಜ್ಜಾ ಖರೀದಿಸುವುದು ಅವರಿಗೆ ಲಾಭದಾಯಕವಾಗಿ ಕಾಣಿಸುತ್ತಿತ್ತಂತೆ. ಆ ದಿನಗಳನ್ನು ನೆನೆದು ನಗುತ್ತಾ ಸಾರಾ ಹೀಗೆ ಹೇಳುತ್ತಾರೆ. ಅಲ್ಲಿ ಒಂದು ಮೀಡಿಯಂ ಪಿಜ್ಜಾ ಕೊಂಡರೆ, ಎರಡನೇ ಪಿಜ್ಜಾ ಮೇಲೆ 50% ಆಫರ್ ಇತ್ತು. ಲಾರ್ಜ್ ಪಿಜ್ಜಾ ಬೆಲೆ ಜಾಸ್ತಿ ಇರುತ್ತಿದ್ದರಿಂದ ನಾನು ಆಫರ್ ಆಸೆಗೆ ಬಿದ್ದು ಎರಡು ಮೀಡಿಯಂ ಪಿಜ್ಜಾ ಆರ್ಡರ್ ಮಾಡುತ್ತಿದ್ದೆ. ಆದರೆ, ಆ ಆಫರ್‌ನಿಂದಾಗಿ ನಾನು ಕೂಡ 50% ನಷ್ಟು ದಪ್ಪಗಾಗುತ್ತೇನೆ ಎಂದು ನನಗೆ ಆಗ ಅರ್ಥವಾಗಲಿಲ್ಲ.

ತಮ್ಮ ತಪ್ಪುಗಳನ್ನು ಅರಿತ ಸಾರಾ, ಸಿನಿಮಾ ರಂಗಕ್ಕೆ ಬರುವ ಮುನ್ನ ಕಠಿಣ ವರ್ಕೌಟ್, ಯೋಗ ಮತ್ತು ಶಿಸ್ತಿನ ಡಯೆಟ್ ಮೂಲಕ 45 ಕೆಜಿ ತೂಕ ಇಳಿಸಿಕೊಂಡು ಅದ್ಭುತ ಬಾಡಿ ಟ್ರಾನ್ಸ್‌ಫಾರ್ಮೇಷನ್ ಮಾಡಿಕೊಂಡರು.

ಸೋಷಿಯಲ್ ಮೀಡಿಯಾದಲ್ಲಿ ಸಾರಾ ಅವರ ಈ ಪ್ರಾಮಾಣಿಕ ಮತ್ತು ತಮಾಷೆಯ ಮಾತುಗಳಿಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಬಯಸುವ ಯಾರಿಗಾದರೂ ಸಾರಾ ಅಲಿ ಖಾನ್ ಅವರ ಈ ಫಿಟ್ನೆಸ್ ಜರ್ನಿ ಖಂಡಿತ ಒಂದು ದೊಡ್ಡ ಇನ್ಸ್‌ಪಿರೇಷನ್.ಸಾರಾ ಅವರ ಈ ಆಫರ್ ಲಾಜಿಕ್ ನಿಮಗೂ ಇಷ್ಟವಾಯಿತೇ? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ .

Edited By : Nirmala Aralikatti
PublicNext

PublicNext

27/05/2026 01:01 pm

Cinque Terre

14.28 K

Cinque Terre

0

ಸಂಬಂಧಿತ ಸುದ್ದಿ