ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಯಾಂಡಲ್‌ವುಡ್‌ಗೆ ಕಿಚ್ಚನ ಸೋದರಳಿಯನ ಎಂಟ್ರಿ: ಧೂಳೆಬ್ಬಿಸುತ್ತಿದೆ ‘ಮ್ಯಾಂಗೋ ಪಚ್ಚ’ ಟ್ರೈಲರ್!

ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆಯ ಪ್ರತಿಭೆಯ ಎಂಟ್ರಿಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಮ್ಯಾಂಗೋ ಪಚ್ಚ’ ಸಿನಿಮಾದ ಆಫೀಶಿಯಲ್ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಟ್ರೈಲರ್‌ನಲ್ಲಿ ಬರುವ ‘ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ತಾರೆ’ ಎಂಬ ಪವರ್‌ಫುಲ್ ಡೈಲಾಗ್ ಈಗ ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ.ಮೊದಲ ಚಿತ್ರದಲ್ಲೇ ಸಂಚಿತ್ ತಮ್ಮ ಆಕ್ಷನ್ ಮತ್ತು ಮಾಸ್ ಸಂಭಾಷಣೆಯ ಮೂಲಕ ಭರವಸೆಯ ನಾಯಕನಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ.

ಕಿಚ್ಚ ಸುದೀಪ್‌ ಅವರ ‘ಸುಪ್ರಿಯಾನ್ವಿ ಸ್ಟುಡಿಯೋಸ್’ ಹಾಗೂ ಖ್ಯಾತ ನಿರ್ಮಾಣ ಸಂಸ್ಥೆ ‘ಕೆಆರ್‌ಜಿ ಸ್ಟುಡಿಯೋಸ್’ ಸಹಯೋಗದಲ್ಲಿ ಈ ಸಿನಿಮಾ ಮೂಡಿಬಂದಿದೆ. ಮೈಸೂರು ಮೂಲದ ವಿವೇಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೈಸೂರಿನ ಸೌಮ್ಯ ಸ್ವಭಾವದ ಸಾಮಾನ್ಯ ಹುಡುಗ ಪ್ರಶಾಂತ್, ಅನಿವಾರ್ಯ ಕಾರಣಗಳಿಂದ ರಗಡ್ ‘ಮ್ಯಾಂಗೋ ಪಚ್ಚ’ನಾಗಿ ಹೇಗೆ ಬದಲಾಗುತ್ತಾನೆ ಎಂಬುದೇ ಸಿನಿಮಾದ ಒನ್‌ಲೈನ್ ಸ್ಟೋರಿ. ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್ ಹಾಗೂ ಕಾಮಿಡಿ ಹೀಗೆ ಎಲ್ಲಾ ಎಲಿಮೆಂಟ್‌ಗಳನ್ನು ಒಳಗೊಂಡಿದೆ.

ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಈ ಸಿನಿಮಾದ ಹಾಡೊಂದಕ್ಕೆ ಧ್ವನಿಯಾಗಿದ್ದು, ಇದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದು, ಟ್ರೈಲರ್‌ನ ಹಿನ್ನೆಲೆ ಸಂಗೀತ (BGM) ಸಿನಿಮಾದ ತೂಕವನ್ನು ಹೆಚ್ಚಿಸಿದೆ .ಸಂಚಿತ್ ಸಂಜೀವ್ ಜೋಡಿಯಾಗಿ ನಟಿ ಕಾಜಲ್ ಕುಂದರ್ ನಟಿಸಿದ್ದರೆ, ವಿಲನ್ ಆಗಿ ಮಯೂರ್ ಪಟೇಲ್ ಅಬ್ಬರಿಸಿದ್ದಾರೆ. ಇವರೊಂದಿಗೆ ‘ಬಿಗ್ ಬಾಸ್’ ಖ್ಯಾತಿಯ ಉಗ್ರಂ ಮಂಜು ಸೇರಿದಂತೆ ಹಲವು ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ನಟ ಸಿಕ್ಕಂತಾಗಿದೆ ಎಂದು ಪ್ರೇಕ್ಷಕರು ಗುಣಗಾನ ಮಾಡುತ್ತಿದ್ದಾರೆ.

Edited By :
PublicNext

PublicNext

27/05/2026 06:11 pm

Cinque Terre

12.09 K

Cinque Terre

0

ಸಂಬಂಧಿತ ಸುದ್ದಿ