ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನಕ್ಕೆ 2 ಪಿಜ್ಜಾ ತಿಂದು 45 ಕೆಜಿ ತೂಕ ಇಳಿಸಿದ್ರಾ ಸಾರಾ ಅಲಿ ಖಾನ್?

ಬೆಂಗಳೂರು : ರೀಲ್ಸ್ ನೋಡ್ತಿರೋ ನಿಮಗೂ ಪಿಜ್ಜಾ ಕಂಡ್ರೆ ತಡ್ಕೊಳ್ಳೋಕೆ ಆಗಲ್ವಾ? ಹಾಗಿದ್ರೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಈ ತಮಾಷೆಯ ಕಥೆ ಕೇಳಿ.

ಸಾರಾ ಅಲಿ ಖಾನ್ ಎಷ್ಟು ಫಿಟ್ ಆಗಿದ್ದಾರೆ ಅಲ್ವಾ? ಆದ್ರೆ ಸಿನಿಮಾ ರಂಗಕ್ಕೆ ಬರೋಕು ಮುನ್ನ ಅವರು ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಇತ್ತೀಚೆಗೆ ತಮ್ಮ ಹಳೆಯ ದಿನಗಳನ್ನು ನೆನೆದ ಸಾರಾ, ನ್ಯೂಯಾರ್ಕ್‌ನಲ್ಲಿ ಕಾಲೇಜು ಓದುತ್ತಿದ್ದಾಗ ದಿನಕ್ಕೆ ಎರಡು ಮೀಡಿಯಂ ಪಿಜ್ಜಾ ಮತ್ತು ಬ್ರೇಕ್‌ಫಾಸ್ಟ್‌ಗೆ ಮೂರು ಚಾಕೊಲೇಟ್ ಬ್ರೌನಿ ತಿನ್ನುತ್ತಿದ್ದರಂತೆ . ಇದಕ್ಕೆ ಕಾರಣ ಅಲ್ಲಿ ಸಿಗುತ್ತಿದ್ದ ಡಿಸ್ಕೌಂಟ್ ಆಫರ್‌ಗಳು. ಒಂದು ಲಾರ್ಜ್ ಪಿಜ್ಜಾ ತಗೊಳ್ಳೋದಕ್ಕಿಂತ, 'ಬೈ ಒನ್ ಗೆಟ್ ಸೆಕೆಂಡ್ 50% ಆಫರ್' ಇದೆ ಅಂತ ದಿನಾ ಎರಡು ಮೀಡಿಯಂ ಪಿಜ್ಜಾ ಆರ್ಡರ್ ಮಾಡ್ತಿದ್ರಂತೆ. ಸಾರಾ ಅವರೇ ನಗುತ್ತಾ ಹೇಳಿದ್ದಾರೆ ಆ ಆಫರ್ ಚಕ್ಕರ್‌ನಲ್ಲಿ ಗಣಿತ ಉಲ್ಟಾ ಹೊಡೆದು, ನಾನು ಕೂಡ 50% ನಷ್ಟು ದಪ್ಪಗಾಗಿದ್ದೆ. ಆದ್ರೆ ಆಮೇಲೆ ಕಠಿಣ ವರ್ಕೌಟ್ ಮಾಡಿ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್ ಮಾಡ್ಕೊಂಡ್ರು. ಈ ಇನ್ಸ್‌ಪಿರೇಷನ್ ಸ್ಟೋರಿ ನಿಮಗಿಷ್ಟ ಆದ್ರೆ, ನಿಮ್ಮ ಪಿಜ್ಜಾ ಪ್ರೇಮಿ ಫ್ರೆಂಡ್ಸ್‌ಗೆ ಈ ರೀಲ್ಸ್ ಈಗಲೇ ಶೇರ್ ಮಾಡಿ.

Edited By :
PublicNext

PublicNext

27/05/2026 05:56 pm

Cinque Terre

8.01 K

Cinque Terre

0