ಬೆಂಗಳೂರು : ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಸಕ್ಸಸ್ ಬಳಿಕ ಮುಂದಿನ ಚಿತ್ರದ ಸ್ಕ್ರಿಪ್ಟ್ ಬರೆಯೋದ್ರಲ್ಲಿ ಕಂಪ್ಲೀಟ್ ಬ್ಯುಸಿಯಾಗಿದ್ದ ರಕ್ಷಿತ್, ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು. ಆದ್ರೆ ಇದೀಗ ಸಡನ್ ಆಗಿ ಪಂಚೆ, ಶಲ್ಯ ಧರಿಸಿ ಮಿರ ಮಿರನೆ ಮಿಂಚುತ್ತಿರೋ ರಕ್ಷಿತ್ ಶೆಟ್ಟಿ ಫೋಟೊಗಳು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗ್ತಿವೆ.
ಅಷ್ಟಕ್ಕೂ ಈ ಲುಕ್ ನೋಡಿ ಫ್ಯಾನ್ಸ್ ಏನಂತಿದ್ದಾರೆ ಗೊತ್ತಾ? 'ಏನಾದ್ರೂ ಗುಡ್ ನ್ಯೂಸ್ ಇದೆಯಾ ಶೆಟ್ರೇ?' ಅಂತ ಕೇಳ್ತಿದ್ದಾರೆ. ಆದ್ರೆ ಅಸಲಿ ವಿಷಯ ಏನಪ್ಪಾ ಅಂದ್ರೆ, ರಕ್ಷಿತ್ ಶೆಟ್ಟಿ ತಮ್ಮ ತಂದೆ-ತಾಯಿಯ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದ ವಿಶೇಷ ಪೂಜೆಗಾಗಿ ಹೀಗೆ ಸಾಂಪ್ರದಾಯಿಕ ಉಡುಪಿನಲ್ಲಿ ರೆಡಿಯಾಗಿದ್ದರು.
ಇಷ್ಟಕ್ಕೇ ಮುಗೀಲಿಲ್ಲ, ಈ ಫೋಟೊಗಳನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮತ್ತು ಮೀಮ್ಸ್‌ಗಳು ಹರಿದಾಡುತ್ತಿವೆ. ರಕ್ಷಿತ್ ಶೆಟ್ಟಿ ಅವರ ಈ ಹೊಸ ಲುಕ್ ಮತ್ತು ಸ್ವಲ್ಪ ಹೆಚ್ಚಾಗಿರೋ ದೇಹದ ತೂಕವನ್ನು ನೋಡಿ, ನೆಟ್ಟಿಗರು ಇವರನ್ನು 'ಸು ಫ್ರಮ್ ಸೋ' ಸಿನಿಮಾದ ಫೇಮಸ್ ಕ್ಯಾರೆಕ್ಟರ್ 'ರವಿ ಅಣ್ಣ'ನಿಗೆ ಹೋಲಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ನಿಧಾನವಾಗಿ ರವಿ ಅಣ್ಣ ಆಗ್ತಿದ್ದಾರೆ' ಅಂತ ಟ್ರೋಲ್ ಪೇಜ್‌ಗಳು ಕಾಲೆಳೆಯುತ್ತಿವೆ. ಯಾಕಂದ್ರೆ ಸಿನಿಮಾದಲ್ಲಿ ರವಿ ಅಣ್ಣನಿಗೂ ಮದುವೆಯಾಗಿರಲ್ಲ, ಇತ್ತ ನಮ್ಮ ಸಿಂಪಲ್ ಸ್ಟಾರ್‌ಗೆ 42 ವರ್ಷ ಆದ್ರೂ ಇನ್ನು ಸಿಂಗಲ್ ಆಗೇ ಇದ್ದಾರೆ. ಏನೇ ಇರಲಿ, 'ರಿಚರ್ಡ್ ಆಂಟನಿ' ಮತ್ತು 'ಪುಣ್ಯಕೋಟಿ' ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡಲಿರೋ ಶೆಟ್ರ ಹೊಸ ಲುಕ್ ಮಾತ್ರ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸ್ತಿದೆ.
PublicNext
27/05/2026 08:57 pm