ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Ranveer Singh Banned?! ಬಾಲಿವುಡ್‌ನಲ್ಲಿ ಬಿಗ್ ಶಾಕ್!

ಬೆಂಗಳೂರು : ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್‌ಗೆ ಈಗ ಬಿಗ್ ಟ್ರಬಲ್! ಹೌದು, Federation of Western India Cine Employees (FWICE) ರಣವೀರ್ ವಿರುದ್ಧ ಈಗ ಕಠಿಣವಾದ 'ನಾನ್-ಕೋಆಪರೇಷನ್ ಡೈರೆಕ್ಟಿವ್' ಅಂದ್ರೆ ಒಂದು ರೀತಿಯ ಬ್ಯಾನ್ ಆರ್ಡರ್ ಇಶ್ಯೂ ಮಾಡಿದೆ. ಡೈರೆಕ್ಟರ್ ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ Don 3 ಸಿನಿಮಾದಿಂದ ರಣವೀರ್ ಸಿಂಗ್ ಲಾಸ್ಟ್ ಮೂಮೆಂಟ್‌ನಲ್ಲಿ ಹಿಂದೆ ಸರಿದಿದ್ದೇ ಈ ಇಡೀ ವಿವಾದಕ್ಕೆ ಮೇನ್ ರೀಸನ್!

ಶೂಟಿಂಗ್ ಶುರುವಾಗಲು ಕೇವಲ ಮೂರು ವಾರ ಬಾಕಿ ಇರುವಾಗ ರಣವೀರ್ ಈ ಪ್ರಾಜೆಕ್ಟ್‌ನಿಂದ ಸಡನ್ ಆಗಿ ವಾಕ್‌ಔಟ್ ಮಾಡಿದ್ದಾರೆ ಅಂತ ಫರ್ಹಾನ್ ಅಖ್ತರ್ ಫೆಡರೇಶನ್‌ಗೆ ಕಂಪ್ಲೇಂಟ್ ಕೊಟ್ಟಿದ್ದರು. ಈ ಲಾಸ್ಟ್ ಮಿನಿಟ್ ಡ್ರಾಪ್‌ನಿಂದಾಗಿ ಪ್ರೊಡಕ್ಷನ್ ಟೀಮ್‌ಗೆ ಬರೋಬ್ಬರಿ 45 ಕೋಟಿ ರೂಪಾಯಿ ಲಾಸ್ ಆಗಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ವಿಚಾರಣೆಗೆ ಬರುವಂತೆ FWICE ಕಡೆಯಿಂದ ಮೂರು ಬಾರಿ ನೋಟಿಸ್ ಮತ್ತು ರಿಮೈಂಡರ್ಸ್ ಕಳಿಸಿದ್ರೂ ರಣವೀರ್ ಸಿಂಗ್ ಯಾವುದೇ ರೆಸ್ಪಾನ್ಸ್ ನೀಡಿರಲಿಲ್ಲ. ಇದೇ ಕಾರಣಕ್ಕೆ ಫೆಡರೇಶನ್ ಈಗ ಈ ಗಂಭೀರ ನಿರ್ಧಾರ ತಗೊಂಡಿದೆ.

ಈ ಬ್ಯಾನ್ ಎಫೆಕ್ಟ್‌ನಿಂದಾಗಿ ಸಿನಿಮಾ ಇಂಡಸ್ಟ್ರಿಯ ಯಾವುದೇ ವರ್ಕರ್ಸ್ ಅಥವಾ ಟೆಕ್ನಿಷಿಯನ್ಸ್ ರಣವೀರ್ ಜೊತೆ ಕೆಲಸ ಮಾಡುವಂತಿಲ್ಲ! ಇತ್ತ ರಣವೀರ್ ಟೀಮ್ ಕೂಡ ರಿಯಾಕ್ಟ್ ಮಾಡಿದ್ದು, "ನಾವು ಈ ಮ್ಯಾಟರ್ ಅನ್ನು ಮ್ಯೂಚುಯಲ್ ರೆಸ್ಪೆಕ್ಟ್‌ನಿಂದ ಸಾಲ್ವ್ ಮಾಡಿಕೊಳ್ಳಲು ಇಷ್ಟಪಡ್ತೀವಿ" ಅಂತ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಶಾರುಖ್ ಖಾನ್ ಬದಲಿಗೆ ಹೊಸ ಡಾನ್ ಆಗಿ ಬರಬೇಕಿದ್ದ ರಣವೀರ್ ಸಿಂಗ್ ಕರಿಯರ್‌ಗೆ ಇದೀಗ ದೊಡ್ಡ ಬ್ರೇಕ್ ಬಿದ್ದಂತಾಗಿದೆ!

Edited By :
PublicNext

PublicNext

27/05/2026 11:54 am

Cinque Terre

7.39 K

Cinque Terre

0