ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026: ಗುಜರಾತ್‌ ವಿರುದ್ಧ 92 ರನ್‌ಗಳಿಂದ ಗೆದ್ದು ಫೈನಲ್‌ಗೆ ಎಂಟ್ರಿ ಕೊಟ್ಟ ಆರ್‌ಸಿಬಿ

ಧರ್ಮಶಾಲಾ: ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಹಾಗೂ ಮಾರಕ ಬೌಲಿಂಗ್ ದಾಳಿ ನಡೆಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 92 ರನ್‌ಗಳಿಂದ ಗೆದ್ದು, ಐಪಿಎಲ್ 2026ರ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಎಂಟ್ರಿ ಕೊಟ್ಟಿದೆ.

ಧರ್ಮಶಾಲಾದಲ್ಲಿ ಇಂದು ನಡೆದ ಐಪಿಎಲ್ 2026ರ ಟೂರ್ನಿಯ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 254 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್‌ ತಂಡವು 19.3 ಓವರ್‌ಗಳಲ್ಲಿ 162 ರನ್‌ ಗಳಿಸಿ ಆಲೌಟ್‌ಗೆ ತುತ್ತಾಗಿ ಸೋಲು ಒಪ್ಪಿಕೊಂಡಿತು. ಜಿಟಿ ಪರ ರಾಹುಲ್ ತೆವಾಟಿಯಾ ಗರಿಷ್ಠ 68 ರನ್‌ (43 ಎಸೆತ) ಗಳಿಸಿದರು.

ಇನ್ನು ಆರ್‌ಸಿಬಿ ಪರ ಜಾಕೋಬ್ ಡಫ್ಫಿ 3 ವಿಕೆಟ್‌, ಭುವನೇಶ್ವರ್ ಕುಮಾರ್‌, ರಾಸಿಖ್ ಸಲಾಂ ಹಾಗೂ ಕೃನಾಲ್ ಪಾಂಡ್ಯ ‌ತಲಾ 2 ವಿಕೆಟ್, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್‌ ಪಡೆದು ತಂಡದ ಗೆಲುವಿಗೆ ಶ್ರಮಿಸಿದರು.

ಇದಕ್ಕೂ ಮುನ್ನ ಆರ್‌ಸಿಬಿಯ ನಾಯಕ ರಜತ್ ಪಾಟಿದಾರ್ ಅಜೇಯ 93 ರನ್‌ (33 ಎಸೆತ), ವಿರಾಟ್‌ ಕೊಹ್ಲಿ 43 ರನ್‌ (25 ಎಸೆತ) ಹಾಗೂ ಕೃನಾಲ್ ಪಾಂಡ್ಯ 43 ರನ್‌ (28 ಎಸೆತ) ಗಳಿಸಿ ತಂಡದ ಗೆಲುವಿಗೆ ಮಹತ್ವ ಕೊಡುಗೆ ನೀಡಿದರು.

Edited By : Vijay Kumar
PublicNext

PublicNext

26/05/2026 11:45 pm

Cinque Terre

93.34 K

Cinque Terre

2