ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ, ಎಲಿಮಿನೇಟರ್ ಪಂದ್ಯವನ್ನು ಆಡಿದ ನಂತರವೂ ಪ್ರಶಸ್ತಿ ಗೆದ್ದ ಏಕೈಕ ತಂಡ ಯಾವುದು ಎಂದು ನಿಮಗೆ ಗೊತ್ತೇ? ಅದು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್).
2016ರ ಐಪಿಎಲ್ ಋತುವಿನಲ್ಲಿ ಎಸ್‌ಆರ್‌ಎಚ್ ತಂಡ ಈ ಐತಿಹಾಸಿಕ ಸಾಧನೆ ಮಾಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು 22 ರನ್‌ಗಳಿಂದ ಮಣಿಸಿದ ಸನ್‌ರೈಸರ್ಸ್, ನಂತರ ಕ್ವಾಲಿಫೈಯರ್ 2ರಲ್ಲಿ ಗುಜರಾತ್ ಲಯನ್ಸ್ (ಜಿಎಲ್) ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಹಾಕಿತ್ತು. ಅಂತಿಮವಾಗಿ, ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 8 ರನ್‌ಗಳ ಅಂತರದಿಂದ ರೋಚಕವಾಗಿ ಸೋಲಿಸಿ, ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
PublicNext
27/05/2026 08:53 pm
LOADING...