ಚಂಡೀಗಢ: ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಬೆನ್ನಲ್ಲೇ ಅದ್ಭುತ ಬೌಲಿಂಗ್ ದಾಳಿ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 47 ರನ್‌ಗಳಿಂದ ಗೆದ್ದು ಕ್ವಾಲಿಫೈಯರ್ 2ಗೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ಮೇ 29ರಂದು ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಫೈಟ್ ನಡೆಸಲಿದೆ.
ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಆರ್ ತಂಡವು 8 ವಿಕೆಟ್ ನಷ್ಟಕ್ಕೆ 243 ರನ್ ಚಚ್ಚಿತ್ತು. ಇದಕ್ಕೆ ಉತ್ತರವಾಗಿ ಹೈದರಾಬಾದ್ ತಂಡವು 19.2 ಓವರ್‌ಗೆ 196 ರನ್ ಗಳಿಸಿ ಆಲೌಟ್‌ಗೆ ತುತ್ತಾಗಿ ಸೋಲು ಒಪ್ಪಿಕೊಂಡಿತು. ಇದರೊಂದಿಗೆ ಹೈದರಾಬಾದ್ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ತಂಡದ ಪರ ನಿತೀಶ್ ಕುಮಾರ್ ರೆಡ್ಡಿ ಗರಿಷ್ಠ 38 ರನ್ ಗಳಿಸಿದರು.
ಇನ್ನು ಆರ್‌ಆರ್ ಪರ ಜೋಫ್ರಾ ಆರ್ಚರ್ 3 ವಿಕೆಟ್, ನಾಂದ್ರೆ ಬರ್ಗರ್, ರವೀಂದ್ರ ಜಡೇಜಾ ಹಾಗೂ ಸುಶಾಂತ್ ಮಿಶ್ರಾ ತಲಾ 2 ವಿಕೆಟ್, ಯಶ್ ರಾಜ್ ಪೂಂಜಾ 1 ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಇದಕ್ಕೂ ಮುನ್ನ ಆರ್‌ಆರ್ ಪರ ವೈಭವ್ ಸೂರ್ಯವಂಶಿ 97 ರನ್, ಧ್ರುವ್ ಜುರೆಲ್ 50 ರನ್, ಯಶಸ್ವಿ ಜೈಸ್ವಾಲ್ 29 ರನ್ ಹಾಗೂ ನಾಯಕ ರಿಯಾನ್ ಪರಾಗ್ 26 ರನ್ ಗಳಿಸಿದ್ದರು.
PublicNext
27/05/2026 11:27 pm
LOADING...