ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಗುಂಡಿನ‌ ದಾಳಿ, ಐದು ಮಂದಿ ಅರೆಸ್ಟ್‌, ಎಲ್ಲ ಆರೋಪಿಗಳ ಮೇಲೆ ಕಾನೂನು ಕ್ರಮ - ಎನ್.ಶಶಿಕುಮಾರ್

ಹುಬ್ಬಳ್ಳಿ: ನಿನ್ನೆ ನಡೆದ ಧಾರವಾಡದ ತಡಸಿನಕೊಪ್ಪದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, ಪ್ರವೀಣ ಸುತಾರಿ, ಫಿಲೋಮಿನ್ ಸೇರಿ ಐದು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬೆನ್ನು ಹತ್ತಿದ್ದಾರೆ.

ಆಸ್ತಿ ವಿಚಾರಕ್ಕೆ ನಡೆದ ಜಗಳದಲ್ಲಿ ಗುಂಡಿನ ಸದ್ದು ಮಾಡಿತ್ತು. ಮೊದಲಿಗೆ ಪ್ರವೀಣ ಸುತಾರಿ, ಸುಂದರ್ ಪಾಲ್ ಇಬ್ಬರು ಅಂಗರಕ್ಷಕರು ಗುಂಡು ಹಾರಿಸಿದ್ದರೆಂದು ವಿಠ್ಠಲ ವಾಲಿಕಾರ ದೂರು ನೀಡಿದ್ದರು. ಆದ್ರೆ ವಿಡಿಯೋಗಳು ಹೊರ ಬರುತ್ತಿದ್ದಂತೆ ಪೊಲೀಸರು ತನಿಖೆ ನಡೆಸಿದಾಗ ಪ್ರವೀಣ ಸುತಾರಿ, ಚಂದ್ರಪೌಲ್ ಈ ಇಬ್ಬರು ಗುಂಡು ಹಾರಿಸಿದ್ದು ಕಂಡು ಬರುತ್ತಿದ್ದಂತೆ, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು, ಆರೋಪಿ ಸುಂದರ್‌ಪೌಲ್ ತಂದೆ ಫಿಲೋಮಿನ್ ಫೋನ್ ಮೂಲಕ ಡೈರೆಕ್ಷನ್ ಕೊಡ್ತಿರೋ ಆರೋಪದ ಮೇಲೆ ಈಗ ಮುಖ್ಯ ಆರೋಪಿ ಪ್ರವೀಣ ಸುತಾರಿ, ಮತ್ತು ಫಿಲೋಮಿನ್, ವಿಶಾಲ, ಇಂದರ್, ಬೆಂಜಿಮಿನ್ ಈ ಐದು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಇನ್ನುಳಿದ ಆರೋಪಿಗಳ ಪತ್ತೆ ಮಾಡುತ್ತೇವೆಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪಬ್ಲಿಕ್ ನೆಕ್ಸ್ಟ್ ಮೂಲಕ ಹೇಳಿದರು.

ಇನ್ನು ಈ‌ ಗುಂಡಿನ ದಾಳಿ ಪ್ರಕರಣದಲ್ಲಿ ಯಾರೇ ಇದ್ರು ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆಂದು ಕಮಿಷನರ್ ಹೇಳಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/05/2026 05:54 pm

Cinque Terre

36.61 K

Cinque Terre

2