ಕುಂದಗೋಳ : ಅಕ್ರಮವಾಗಿ ಸಾಗಾಟವಾಗುತ್ತಿದ್ದ 3.15 ಲೀಟರ್ ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂದಗೋಳ ತಾಲೂಕು ಕುಂಕೂರು ಗ್ರಾಮದ ಮಹೇಶ್ ಮುರಗಯ್ಯ ಹಿರೇಮಠ ಎಂಬಾತ ಮಳಲಿ ಕುಂಕೂರು ಮಾರ್ಗವಾಗಿ ಬೈಕ್ ಮೇಲೆ ಮದ್ಯ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಂದಗೋಳ ಅಬಕಾರಿ ಇಲಾಖೆ ಪೊಲೀಸರು 3.15 ಲೀಟರ್ ಮದ್ಯ ಹಾಗೂ ಕೆಎ-27 ಇಕ್ಯೂ-4754 ಸಂಖ್ಯೆ ಬಜಾಜ್ ಬೈಕ್ ವಶಕ್ಕೆ ಪಡೆದಿದ್ದು ಆರೋಪಿ ಪರಾರಿಯಾಗಿದ್ದಾನೆ.
ಈ ಘಟನೆ ಮೇ.26 ಮಂಗಳವಾರ ಮಧ್ಯಾಹ್ನ 1-30 ಗಂಟೆಗೆ ನಡೆದಿದ್ದು 30/2025-26 ಅಬಕಾರಿ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ಅಮಿತ್ ಬೆಳ್ಳುಬ್ಬಿ ನೇತೃತ್ವದಲ್ಲಿ ಇತರೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಜಾಲ ಪತ್ತೆ ಹಚ್ಚಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
27/05/2026 07:31 pm
LOADING...