ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚರಂಡಿಗೆ ಶೌಚಾಲಯದ ಮಲ ಹರಿಬಿಟ್ಟ ಸೆಪ್ಟಿಕ್ ಟ್ಯಾಂಕ್ ವಾಹನ ! ಜನ ಆಕ್ರೋಶ

ಹುಬ್ಬಳ್ಳಿ : ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಿದ ಮಲ ಮತ್ತು ನೀರನ್ನು ಹಳ್ಳಿಗಳ ಚರಂಡಿಗಳಿಗೆ ಹರಿ ಬಿಡುವ ಖಾಸಗಿ ವಾಹನವೊಂದು ಪ್ರತ್ಯಕ್ಷವಾಗಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಮತ್ತು ಸಾರ್ವಜನಿಕ ಕಣ್ಣಿಗೆ ಸಿಕ್ಕಿ ಬಿದ್ದಿದೆ.

ಎಲ್ಲೆಡೆ ಸಾಂಕ್ರಾಮಿಕ ರೋಗಗಳೇ ಅತಿಯಾಗಿ ಜನ ಯಾತನೆ ಪಡುತ್ತಿರುವ ದಿನಗಳಲ್ಲಿ ಹುಬ್ಬಳ್ಳಿ ತಾಲುಕು ನೂಲ್ವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಪಕ್ಕದ ಚರಂಡಿಗಳಲ್ಲಿ ಪಿ.ಆರ್.ಕೆ ಹೆಸರಿನ ಖಾಸಗಿ ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ವಾಹನ ಖಾಸಗಿ ಮನೆಗಳ ಶೌಚಾಲಯದ ಮಲ ತುಂಬಿಕೊಂಡು ಬಂದು ರಾಜಾರೋಷವಾಗಿ ಚರಂಡಿಗೆ ಹರಿಬಿಡುತ್ತಿದೆ.

ಕೆಎ-20 ಎಬಿ-1160 ಸಂಖ್ಯೆಯ ಸೆಪ್ಟಿಕ್ ಟ್ಯಾಂಕ್ ಕ್ಲಿನಿಂಗ್ ವಾಹನದ ಚಾಲಕ ಮತ್ತು ಸಿಬ್ಬಂದಿ ನೂಲ್ವಿ ಗ್ರಾಮದ ಚರಂಡಿಯಲ್ಲಿ ಶೌಚಾಲಯದ ಮಲವನ್ನು ಬೇಕಾಬಿಟ್ಟಿ ಹರಿ ಬಿಡುವ ವೇಳೆ ಜನರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ನಿಯಮಾನುಸಾರ ಸೆಪ್ಟಿಕ್ ಟ್ಯಾಂಕ್ ತುಂಬಿಕೊಂಡ ಮಲವನ್ನು ಪ್ರತ್ಯೇಕ ಜಾಗದಲ್ಲಿ ಬಿಡಬೇಕು. ಆದರೆ ನಿತ್ಯ ಜನ ಓಡಾಡುವ, ನಿವಾಸಿಗಳು ವಾಸಿಸುವ ಮನೆಯ ಚರಂಡಿಗೆ ಮಲ ಹರಿಬಿಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅವ್ಯವಸ್ಥೆಯನ್ನು ನೂಲ್ವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಕಾಳೆ ಅವರ ಗಮನಕ್ಕೂ ತರಲಾಗಿದ್ದು, ಸಂಬಂಧಪಟ್ಟ ಗ್ರಾಮೀಣ ಪೊಲೀಸ್ ಅಧಿಕಾರಿಗಳು, ಆರ್.ಟಿ.ಓ ಅಧಿಕಾರಿಗಳು ಈ ವಾಹನದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನರಿಂದ ಒತ್ತಾಯ ಕೇಳಿ ಬಂದಿವೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/05/2026 04:21 pm

Cinque Terre

15.56 K

Cinque Terre

0