ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ ಜಯ ಕರ್ನಾಟಕ ಸಂಘಟನೆ ಬೆಂಬಲ

ಧಾರವಾಡ: ಜಯ ಕರ್ನಾಟಕ ಸಂಘಟನೆ ಸದಸ್ಯರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹೋರಾಟಗಾರರಿಗೆ ಹೂ ಮಾಲೆ ಹಾಕಿ ಗೌರವಿಸಿದರು.

ಈಗಾಗಲೇ ರಾಜ್ಯಪಾಲರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಶಿಫಾರಸ್ಸಿಗೆ ಸಹಿ ಹಾಕಿದ್ದಾರೆ. ಹಿರಿಯ ನ್ಯಾಯವಾದಿ ಬಿ.ಡಿ ಹಿರೇಮಠ ಅವರ ನೇತೃತ್ವದಲ್ಲಿ ಹೋರಾಟ ಯಶಸ್ವಿಯಾಗುವತ್ತ ಸಾಗಿದೆ. ಜಯ ಕರ್ನಾಟಕ ಸಂಘಟನೆ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾಧ್ಯಕ್ಷ ಸುದೀರ ಮುಧೋಳ ತಿಳಿಸಿದರು.

ಪಕ್ಷಾತೀತವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವ ಜೊತೆಗೆ ಮುಂಬರುವ ದಿನಗಳಲ್ಲಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಂಜುನಾಥ ಸುತಗಟ್ಟಿ, ಲಕ್ಷ್ಮಣ ದೊಡ್ಡಮನಿ, ದುರ್ಗಪ್ಪ ಕಡೆಮನಿ, ಗಂಗಪ್ಪ ದೊಡ್ಡಮನಿ, ಯೂಸೂಫ್ ದೊಡ್ಡವಾಡ, ಹರೀಶ ನಾಯಕ, ಮಣಿಕಂಠ ಹವಾಲ್ದಾರ ಸೇರಿದಂತೆ ಇತರರಿದ್ದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/05/2026 02:01 pm

Cinque Terre

26.33 K

Cinque Terre

0

ಸಂಬಂಧಿತ ಸುದ್ದಿ