ಅಜ್ಮೀರ್: ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ನಡೆದ ಭೀಕರ ದುರಂತವೊಂದರಲ್ಲಿ, ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಜೀವದಹನವಾಗಿದ್ದಾರೆ.
ಬೊರಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಮೃತಪಟ್ಟವರಲ್ಲಿ ಗ್ರಾಮದ ಮಾಜಿ ಮುಖ್ಯಸ್ಥ ರಾಮಸಿಂಗ್ ಚೌಧರಿ, ಅವರ ಅನಾರೋಗ್ಯ ಪೀಡಿತ ತಾಯಿ ಹಾಗೂ ಸ್ಥಳೀಯ ಜಿಲ್ಲಾ ಪರಿಷತ್ ಸದಸ್ಯೆ ಪುಸಿ ದೇವಿ ಸೇರಿದ್ದಾರೆ. ಇವರೊಂದಿಗೆ ಮತ್ತೊಬ್ಬರೂ ಸಾವನ್ನಪ್ಪಿದ್ದಾರೆ. ಮಾಜಿ ಸರಪಂಚ್ ರಾಮಸಿಂಗ್ ಚೌಧರಿ ಅವರು ತಮ್ಮ ತಾಯಿ ಮತ್ತು ಜಿಲ್ಲಾ ಪರಿಷತ್ ಸದಸ್ಯೆ ಪುಸಿ ದೇವಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ.
PublicNext
28/05/2026 05:37 pm
LOADING...