ರಾಯಬಾಗ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಜಾಮಿಯಾದ್ ಮಸ್ಜಿದನಲ್ಲಿ ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬವು ಶಾಂತಿಯುತವಾಗಿ ನೆರವೇರಿತು. ಬೆಳಗ್ಗೆ 9:30ಕ್ಕೆ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ಪವಿತ್ರ ಕುರಾನ್ ಪಠಣೆ ಮಾಡಿದರು. ಪರಸ್ಪರ ಹಬ್ಬದ ಶುಭಾಶಯ ಕೋರಿ, ಸಂಭ್ರಮಿಸಿದರು.
ಈ ವೇಳೆ ಹಾರೂಗೇರಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಸಾಗರ ಕಾಂಬಳೆ ಹಾಗು ಎಸ್ ಎ ಜಂಬಿಗಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್ , ರಾಯಬಾಗ.
PublicNext
28/05/2026 06:54 pm
LOADING...