ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮೀಣ, ಬಡ ಪ್ರತಿಭೆಗಳಿಗೆ ಸುವರ್ಣಾವಕಾಶ: FUTURE FORGE ENGINEERING ACADEMY ನಿಮಗಾಗಿ..!

ಹುಬ್ಬಳ್ಳಿ: ಪಿಯುಸಿ ಸೈನ್ಸ್ ನಂತರದಲ್ಲಿ ಅದೆಷ್ಟೋ ಪ್ರತಿಭೆಗಳು ದೊಡ್ಡಮೊತ್ತದ ಶುಲ್ಕ ಪಾವತಿಸಲು ಸಾಧ್ಯವಾಗದೇ, ಇಂಜಿನಿಯರಿಂಗ್ ಕನಸನ್ನು ಕೈಬಿಡುತ್ತಾರೆ. ಆರ್ಥಿಕ ವ್ಯವಸ್ಥೆ ಸರಿದೂಗಿಸಲು ಹೋರಾಟ ನಡೆಸಿ ಕನಸನ್ನು ನನಸಾಗಿಸದೇ ಜೀವನೋಪಾಯದ ಮಾರ್ಗ ಹುಡುಕುತ್ತಾರೆ. ಆದರೆ ಅಂತಹ ಹಲವಾರು ಕನಸನ್ನು ನನಸಾಗಿಸಿ, ಗ್ರಾಮೀಣ ಭಾಗದ ಹಾಗೂ ಆರ್ಥಿಕ ದುರ್ಬಲ ವರ್ಗದ ಪ್ರತಿಭೆಗಳಿಗೆ ಪೂರಕ ವೇದಿಕೆ ಕಲ್ಪಿಸಲು FUTURE FORGE ENGINEERING ACADEMY ಮುಂದಾಗಿದೆ.

ಉತ್ತರ ಕರ್ನಾಟಕದ ಭವಿಷ್ಯದ ಇಂಜಿನಿಯರ್‌ ಆಗುವಂತಹ ವಿದ್ಯಾರ್ಥಿಗಳಿಗೆ ಈಗ ಒಂದು ಸುವರ್ಣ ಅವಕಾಶ ಬಂದೊದಗಿದೆ. ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆರಂಭಗೊಂಡಿರುವ FUTURE FORGE ENGINEERING ACADEMY ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಇಂಜಿನಿಯರಿಂಗ್ ಕನಸನ್ನು ನನಸು ಮಾಡಲಿದೆ. ಉತ್ತರ ಕರ್ನಾಟಕದ ಹಳ್ಳಿಗಳಿಂದ, ಶಹರದಲ್ಲಿ ಇರುವಂತಹ ಆರ್ಥಿಕ ದುರ್ಬಲ ಇರುವಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಶಿಕ್ಷಣ ನೀಡುವ ಜೊತೆಗೆ ಭವಿಷ್ಯಕ್ಕೆ ಬಹುದೊಡ್ಡ ಅಡಿಪಾಯ ಹಾಕಲು ಮುಂದಾಗಿದೆ.

ಯಾವುದೇ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕನಸಿನಿಂದ ವಂಚಿತರಾಗದಂತೆ ವಿಶೇಷ ಪ್ರಯತ್ನದೊಂದಿಗೆ ತಲೆಯೆತ್ತಿರುವ FUTURE FORGE ENGINEERING ACADEMY, ಸುಸಜ್ಜಿತ ಕಟ್ಟಡ, ಗುಣಮಟ್ಟದ ಕ್ಲಾಸ್ ರೂಮ್, ಹೈಟೆಕ್ ಲ್ಯಾಬ್ ಹಾಗೂ ಲ್ಯಾಬೋರೇಟರಿಗಳು, ಗ್ರಂಥ ಭಂಡಾರದಂತಿರುವ ಗ್ರಂಥಾಲಯ, ನುರಿತ ಬೋಧಕ ಸಿಬ್ಬಂದಿಗಳ ಸಮಾಗಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಲು FUTURE FORGE ENGINEERING ACADEMY ಮುಂದಾಗಿದೆ. 'AICTE' ನವದೆಹಲಿಯಿಂದ ಮಾನ್ಯತೆ ಪಡೆದಿದ್ದು, VTU ಬೆಳಗಾವಿ ಜೊತೆಗೆ ಅಫಿಲೇಟೆಡ್ ಆಗಿರುವ ಸಂಸ್ಥೆಯು ಪ್ರತಿಭೆಗಳ ಅನಾವರಣಕ್ಕೆ ಮುಂದಾಗಿದೆ.

ಇನ್ನೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮಷೀನ್ ಲರ್ನಿಂಗ್', ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್', ಎಲೆಕ್ಟ್ರಿಕ್ ಆ್ಯಂಡ್'ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ಹಾಗೂ 'ಮೆಕ್ಯಾನಿಕಲ್ ಇಂಜಿನಿಯರಿಂಗ್ ಹೀಗೆ 5 ಬ್ರಾಂಚ್‌ಗಳನ್ನು ಆರಂಭಿಸಿದ್ದು, ಪ್ರತಿಯೊಂದು ಶಾಖೆಯಲ್ಲಿಯೂ 60 ಸೀಟು ಪ್ರವೇಶ ಪಡೆಯಬಹುದಾಗಿದೆ. ಅಲ್ಲದೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಮೈದಾನದ ವ್ಯವಸ್ಥೆಯ ಜೊತೆಗೆ ಅತ್ಯಂತ ಆಧುನಿಕ ಮಾದರಿಯ ಕಟ್ಟಡ ಕೂಡ ಇಲ್ಲಿ ಲಭ್ಯವಿದ್ದು, ಎಲ್ಲರೂ ಇದರ ಅವಕಾಶವನ್ನು ಬಳಸಿಕೊಳ್ಳಬೇಕಿದೆ.

ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣ ಈಗ ನಿಮ್ಮ ಹುಬ್ಬಳ್ಳಿಯಲ್ಲಿಯೇ ಸಿಗಲಿದ್ದು, ಬೇರೆಡೆಗೆ ಹೋಗುವ ಚಿಂತೆ ಏಕೆ..? ಈಗಲೇ ಭೇಟಿ ನೀಡಿ ನಿಮ್ಮ ಪ್ರವೇಶವನ್ನು ಕಾಯ್ದಿರಿಸಿಕೊಳ್ಳಿ..

ವಿಳಾಸ..

FUTURE FORGE ENGINEERING ACADEMY

ಉಪನೋಂದಣಾಧಿಕಾರಿಗಳ ಕಚೇರಿಯ ಹತ್ತಿರ

ವಿದ್ಯಾನಗರ ಹುಬ್ಬಳ್ಳಿ

ದೂರವಾಣಿ ಸಂಖ್ಯೆ- 8123076001, 8123076002, 8123076003, 8123076004

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/05/2026 07:41 pm

Cinque Terre

86.58 K

Cinque Terre

0

ಸಂಬಂಧಿತ ಸುದ್ದಿ