ಧಾರವಾಡ: 2025 -26 ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಜೆ ಇ ಇ (Advanced) ಪರೀಕ್ಷೆಯಲ್ಲಿ ನಮ್ಮ ಅರ್ಜುನ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ ಮತ್ತು AIR ರಾಂಕಿಂಗ್ ನಲ್ಲಿ ಅತ್ಯುತ್ತಮ ಶ್ರೇಣಿಯನ್ನು ಪಡೆದಿದ್ದಾರೆಂದು ಹೇಳಲು ಹೆಮ್ಮೆ ಅನಿಸುತ್ತದೆ.
ಸತತ ಎರಡು ವರ್ಷಗಳ ಪರಿಶ್ರಮ, ಪ್ರಯತ್ನ, ನಮ್ಮ ಸಂಸ್ಥೆಯ ಶಿಕ್ಷಕರ ಮಾರ್ಗದರ್ಶನದ ಸಾರಥ್ಯದಲ್ಲಿ ವಿದ್ಯಾರ್ಥಿಗಳ ಈ ಫಲಿತಾಂಶ ತೃಪ್ತಿ ತಂದಿದೆ.
ಸಾಧನೆಗೈದ ವಿದ್ಯಾರ್ಥಿಗಳಾದ ಅನ್ಮೋಲ್ ಪ್ರಭು (AIR 1254), ಕೇದಾರ್ ಜೋಶಿ (AIR 2283), ದರ್ಶನ್ ಭಟ್ (AIR 8419, EWS 1044), ಧ್ರುವಂತ (AIR 10282, OBC 2486), ವಿನೀತ್ ಚವ್ಹಾಣ (AIR 11703, OBC 2901), ಅನೀಶ್ ನಾಯ್ಕ್ (AIR 21196, OBC 5809), ಕಾರ್ತಿಕ್ ಭಜಂತ್ರಿ (AIR 22651, SC 720), ಆಕಾಶ ರಾಠೋಡ್ (AIR SC 2369) ವಿದ್ಯಾರ್ಥಿಗಳು ಸಾಧನೆ ಜೊತೆಗೆ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿರುವುದು ಶ್ಲಾಘನೀಯ ಸಂಗತಿ.
ಸಾಧನೆಯ ಫಲಶ್ರುತಿಯನ್ನು ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿ ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/06/2026 08:33 pm
LOADING...