ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ವಿದ್ಯುತ್ ವಿತರಣೆಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ನೀಡಬಾರದು : ಬಸವರಾಜಪ್ಪ

ಶಿವಮೊಗ್ಗ : ರಾಜ್ಯ ಸರ್ಕಾರ ವಿದ್ಯುತ್ ವಿತರಣೆಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ನೀಡುತ್ತಿರುವುದನ್ನು ರಾಜ್ಯ ರೈತ ಸಂಘ ವಿರೋಧಿಸುತ್ತದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಕೋಟಿ ಮೌಲ್ಯದ ವಿತರಣಾ ಜಾಲ, ಉಪಕೇಂದ್ರ, ಯಂತ್ರೋಪಕರಣ, ಬೃಹತ್ ಸೌಕರ್ಯ ಹೊಂದಿರುವ ಸಾರ್ವಜನಿಕ ಆಸ್ತಿಯಾಗಿದ್ದು, ಈಗೀರುವ ಕಂಪನಿಗಳು ಮತ್ತು ನೌಕರರು ಸಂಪರ್ಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಈಗೀರುವ ಕಂಪನಿಗಳನ್ನು ಖಾಸಗಿ ಅವರಿಗೆ ವಹಿಸುತ್ತಿರುವುದನ್ನು ನಾವು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಕಂಪನಿಗಳ 19 ಜಿಲ್ಲೆಗಳ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಗಿಯವರಿಗೆ ವಹಿಸುತ್ತಿದೆ. ಇಂದು ಮುಂಬೈ, ದೆಹಲಿಯಲ್ಲಿ ಖಾಸಗಿ ಅವರು ಯುನಿಟ್‌ನಿಗೆ 14ರೂ. ವರೆಗೂ ದುಬಾರಿ ದರ ನಿಗದಿ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಸರಾಸರಿ 6.50 ರೂ ಯುನಿಟ್‌ಗೆ ಇದೆ. ಇದೇ ಒರಿಸ್ಸಾದಲ್ಲಿ ಖಾಸಗಿ ಕಂಪನಿ ನಿರ್ವಹಣೆ ಮಾಡಲಾರದೆ ಅರ್ಧದಲ್ಲೆ ಬಿಟ್ಟು ಹೋಗಿದೆ. ಖಾಸಗಿ ಅವರಿಗೆ ವಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಜೂ.20ರೊಳಗೆ ದೂರು ಸಲ್ಲಿಸುವಂತೆ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ ಎಂದರು.

Edited By : PublicNext Desk
Kshetra Samachara

Kshetra Samachara

30/05/2026 07:37 pm

Cinque Terre

360

Cinque Terre

0

ಸಂಬಂಧಿತ ಸುದ್ದಿ