ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಕೆ.ಹೆಚ್.ಮುನಿಯಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಶಿವಮೊಗ್ಗ : ದಲಿತ ಸಮುದಾಯದ ಹಿರಿಯ ಹಾಗೂ ಪ್ರಭಾವಿ ನಾಯಕರಾದ ಕೆ.ಹೆಚ್.ಮುನಿಯಪ್ಪ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಮಾದಾರ ಮಹಾಸಭಾ ಜಿಲ್ಲಾ ಸಮಿತಿ ಶಿವಪ್ಪನಾಯಕ ವೃತ್ತದ ಮುಂದೆ ಬೃಹತ್ ಪ್ರತಿಭಟನೆ ನಡೆಸಿ, ಒತ್ತಾಯ ಮಾಡಿತು.

ಕೆ.ಹೆಚ್.ಮುನಿಯಪ್ಪನವರು ಕೇಂದ್ರ ಸಚಿವರಾಗಿ ಪ್ರಸ್ತುತ ರಾಜ್ಯ ಸಚಿವರಾಗಿ ದೀರ್ಘಕಾಲದ ಆಡಳಿತ ಅನುಭವ ಹೊಂದಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಜನಪರ ನಾಯಕರಾಗಿದ್ದಾರೆ. ಐದು ದಶಕಗಳಿಂದ ಪಕ್ಷ ಸಂಘಟನೆ, ದಲಿತ ಸಮುದಾಯಗಳ ಹಕ್ಕುಗಳ ರಕ್ಷಣೆ, ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಟ ನಡೆಸಿ, ರಾಜ್ಯದ ಮಾದಿಗ ಸಮುದಾಯದ ರಾಜಕೀಯ ಧ್ವನಿಯಾಗಿದ್ದಾರೆ.

ಇದುವರೆಗೆ ಮಾದಿಗ ಸಮುದಾಯಕ್ಕೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ದೊರಕಿಲ್ಲ. ಆದ್ದರಿಂದ ಸಾಮಾಜಿಕ ನ್ಯಾಯದ ಆಶಯವನ್ನು ಬಲಪಡಿಸುವ ನಿಟ್ಟಿನಲ್ಲಿ ಡಾ.ಕೆ.ಹೆಚ್.ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜ್ಯದಲ್ಲಿ ಪಕ್ಷದ ಬಲ ಹೆಚ್ಚಲಿದೆ. ಆದ್ದರಿಂದ ಕೂಡಲೇ ಪಕ್ಷದ ವರಿಷ್ಟರು ಸಮುದಾಯದ ಭಾವನೆಗಳಿಗೆ ಸ್ಪಂದಿಸಿ ಕೆ.ಹೆಚ್. ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಮಾದರ ಮಹಾಸಭಾ ಆಗ್ರಹಿಸಿದೆ.

Edited By : PublicNext Desk
Kshetra Samachara

Kshetra Samachara

30/05/2026 07:40 pm

Cinque Terre

440

Cinque Terre

0

ಸಂಬಂಧಿತ ಸುದ್ದಿ