ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪಾಳು ಬಿದ್ದ ವಿಶ್ವ‌ ದರ್ಜೆಯ ಈಜುಕೊಳ, ಕ್ರೀಡಾಪಟುಗಳಿಗೆ ನಿರಾಸೆ

ಪಬ್ಲಿಕ್ ನೆಕ್ಸ್ಟ್, ವಿಶೇಷ

ಬೆಳಗಾವಿ: ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಬೆಳಗಾವಿಯ ಹನುಮಾನ ನಗರದ ಬಾಕ್ಸೆಟ್ ರಸ್ತೆ ಪಕ್ಕದಲ್ಲಿ ಇರುವ ಉದ್ಯಾನದಲ್ಲಿ ನಿರ್ಮಿಸಿರುವ ಅಂತರಾಷ್ಟ್ರೀಯ ದರ್ಜೆಯ ಈಜುಕೊಳ ಬಳಕೆಯಾಗದೇ ಪಾಳು ಬಿದ್ದಿದ್ದು, ಈಜು ಪ್ರಿಯರಿಗೆ, ಕ್ರೀಡಾಪಟುಗಳಲ್ಲಿ ನಿರಾಸೆ ಮೂಡಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆಯಿಂದ 2019 ರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಒಲಂಪಿಕ್ಸ್ ಗೇಮ್‌ನಲ್ಲಿ ಬಳಸುವ ಅಂತರಾಷ್ಟ್ರೀಯ ದರ್ಜೆ ಅಳತೆ ಮತ್ತು ಗುಣಮಟ್ಟವನ್ನು ಆಧರಿಸಿ ಈಜುಕೊಳ ನಿರ್ಮಿಸಲಾಗಿದೆ. ಆದರೆ, ನಿರ್ಮಾಣ ಮಾಡಿರುವ ಉದ್ದೇಶವನ್ನೇ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ.

ಹನುಮಾನ್ ನಗರದ ಪ್ರಸ್ತುತ ಈಜುಕೊಳ ನೋಡಿದರೆ ಅನಾಥ ಕೆರೆಯಂತೆ ಭಾಸವಾಗುತ್ತಿದೆ. ಅಲ್ಲಲ್ಲಿ ಕಿತ್ತುಬಂದಿರುವ ಟೈಲ್ಸ್ ಇನ್ನೊಂದೆಡೆ ಚೆಲ್ಲಾಪಿಲ್ಲಿಯಾಗಿ ನಿರ್ಮಾಣ ಸಾಮಗ್ರಿ‌, ಈಜುಕೊಳದಲ್ಲಿ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಮಳೆ ನೀರು ನಿಲ್ಲುತ್ತಿದ್ದು, ಸೊಳ್ಳೆ ಉತ್ಪತ್ತಿಗೆ ಆಸ್ಪದ ನೀಡಿದಂತಾಗಿದೆ. ಕಳೆದ ಹಲವು ವರ್ಷಗಳಿಂದ ಈಜುಕೊಳ ಪಾಳು ಬಿದ್ದಿದ್ದರಿಂದ ಸುತ್ತಲೂ ಗಿಡಗಂಟಿ ಬೆಳೆದು ನಿಂತಿವೆ. ಇದರಿಂದ ಅನೈತಿಕ ಚಟುವಟಿಕೆಗೂ ಅವಕಾಶ ಕಲ್ಪಿಸಿದಂತಾಗಿದೆ.

ಅಂತರಾಷ್ಟ್ರೀಯ ದರ್ಜೆಯ ಕ್ರೀಡೆಗಳನ್ನು ನಡೆಸುವುದಕ್ಕೆ ಯಾವ ಮಾದರಿ ಬೇಕೋ ಅದೇ ರೀತಿಯಲ್ಲಿ ವ್ಯವಸ್ಥಿತವಾಗಿ ಈಜುಕೊಳ ನಿರ್ಮಿಸಲಾಗಿದೆ. 50x100 ಮೀಟರ್ ಅಳತೆಯ ಸ್ಟ್ಯಾಂಡರ್ಡ್ ನಲ್ಲಿ ಸಿದ್ಧಪಡಿಸಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಉಡುಪು ಬದಲಾಯಿಸುವ ಹೌಸ್ ಇವೆ. ಅಂಡರ್ ಯುಜಿ ಟ್ಯಾಂಕ್, ಪಂಪಿಂಗ್ ಹೌಸ್, ಫಿಲ್ಟರ್ ಯೂನಿಟ್ ವ್ಯವಸ್ಥೆ ಇದೆ. ಆದರೆ, ಅವೆಲ್ಲವೂ ಪಾಳು ಬಿದ್ದಿದ್ದು, ಉದ್ದೇಶ ಮಾತ್ರ ಈಡೇರುತ್ತಿಲ್ಲ ಎಂದು ನಾಗರಿಕರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಪಾಲಿಕೆ ಅಧಿಕಾರಿಗಳಾಗಲಿ ಗಮನ ಹರಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಲ್ಹಾದ್ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Vinayak Patil
PublicNext

PublicNext

31/05/2026 03:03 pm

Cinque Terre

11.49 K

Cinque Terre

0

ಸಂಬಂಧಿತ ಸುದ್ದಿ