ಬೆಳಗಾವಿ: ಬೇಸಿಗೆ ರಜೆಯ ಮಜಾ ಮುಗಿಸಿದ ವಿದ್ಯಾರ್ಥಿಗಳು ಇಂದು ಸಂಭ್ರಮದಿಂದ ಶಾಲೆಗೆ ಮರಳಿದ್ದಾರೆ.
ಜೂನ್ 1ರ ಸಂಪ್ರದಾಯದಂತೆ ಜಿಲ್ಲೆಯಾದ್ಯಂತ ‘ಶಾಲಾ ಪ್ರಾರಂಭೋತ್ಸವ’ ಅದ್ಧೂರಿಯಾಗಿ ಜರುಗಿತು. ಮೊದಲ ದಿನ ಶಾಲೆಗಳಲ್ಲಿ ಹಬ್ಬದ ವಾತಾವರಣವೇ ನಿರ್ಮಾಣ ಆಗಿತ್ತು.
ಎರಡು ತಿಂಗಳು ರಜೆ ಮುಗಿದ ನಂತರ ಮಕ್ಕಳನ್ನು ಸ್ವಾಗತಿಸಲು ಅಕ್ಷರಶಃ ಶಿಕ್ಷಕರು ಮನೆಯಲ್ಲಿ ಹಬ್ಬ ಇರುವ ರೀತಿಯಲ್ಲಿ ಹೊಸ ಬಟ್ಟೆ ತೊಟ್ಟು ಕಾತುರರಾಗಿದ್ದರು. ಕೊಠಡಿಗಳು, ಶಾಲೆಯ ಆವರಣ ಸಂಪೂರ್ಣ ಸ್ವಚ್ಛಗೊಳಿಸಲಾಗಿತ್ತು.
ಮಕ್ಕಳು ಪ್ರವೇಶ ದ್ವಾರಕ್ಕೆ ಬರುತ್ತಿದ್ದಂತೆ ಶಿಕ್ಷಕರು ಪುಷ್ಪವೃಷ್ಟಿಗೈದು, ಗುಲಾಬಿ ಹೂವು ನೀಡಿ, ಪೆನ್ನು-ಪುಸ್ತಕ ಕೊಟ್ಟು ಬರಮಾಡಿಕೊಂಡರು. ಬಳಿಕ ಪ್ರಸಕ್ತ ವರ್ಷದ ಪಠ್ಯಪುಸ್ತಕಗಳು, ಸಮವಸ್ತ್ರ, ಶೂಗಳನ್ನು ಇದೇ ವೇಳೆ ವಿತರಿಸಲಾಯಿತು.
PublicNext
01/06/2026 05:45 pm
LOADING...