ರಾಯಬಾಗ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪಿ ಎಂ ಶ್ರೀ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ಶಾಲಾ ಮಕ್ಕಳಿಂದ ಪ್ರಭಾತ್ ಪೇರಿ ನಡೆಸಲಾಯಿತು. ಶಾಲಾ ಪ್ರಾರಂಭೋತ್ಸವದ ಶಾಲೆಗೆ ಹುಮ್ಮಸ್ಸಿನಿಂದ ಆಗಮಿಸಿದ್ದರು.
ಎತ್ತಿನಗಾಡಿಯ ಮೂಲಕ ಪ್ರಭಾತ್ ಪೇರಿಗೆ ಗಣ್ಯಮಾನ್ಯರಿಂದ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೈಕ್ಷಣಿಕ ಜಾಗ್ರತಾ ಘೋಷಣೆಗಳನ್ನು ಹೇಳುತ್ತ ಸಾಗಿದ ಪ್ರಭಾತ್ ಪೇರಿ ಶಾಲೆ ತಲುಪಿದ ಬಳಿಕ ಸಮಾಪ್ತಿ ಆಯಿತು. ನಂತರ ಶಾಲಾ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಗಳಖೋಡ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಸಿ ಬಾಗೆನ್ನವರ, ಶಾಲೆಯ ಮುಖ್ಯ ಗುರುಗಳಾದ ಎಮ್ ಕೆ ಪತ್ತಾರ, ಸಹ ಶಿಕ್ಷಕ ಪಿ ಬಿ ಗಸ್ತಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಪರಶುರಾಮ ಹಳ್ಳೂರ, ಉಪಾಧ್ಯಕ್ಷೆ ಸವಿತಾ ಹಿಪ್ಪರಿಗಿ, ಸದಸ್ಯರಾದ ಜ್ಞಾನೇಶ್ವರ ಅಳಗೋಡಿ, ಸುನಿಲ ಆಸಂಗಿ, ಮೋಹನ ಲಮಾಣಿ, ಉಮೇಶ ಮಸರಗುಪ್ಪಿ, ಸಚಿನ್ ಹುಣಸಿಕಟ್ಟಿ, ಪಾಲಕರಾದ ಹೊಳೆಪ್ಪ ನಡುವಿನಕೇರಿ, ಸಹ ಶಿಕ್ಷಕ, ಶಿಕ್ಷಕಿಯರು ಶಾಲಾ ಮಕ್ಕಳು ಹಾಜರಿದ್ದರು.
ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್ ನ್ಯೂಸ್ ರಾಯಬಾಗ
Kshetra Samachara
01/06/2026 04:40 pm
LOADING...