ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಶಮನೇವಾಡಿ ಎಜಿಎಂ ಕಾಲೇಜ್ ಲೋಕಾರ್ಪಣೆ - ರಾಜ್ಯಪಾಲರಿಂದ ವಿದ್ಯುಕ್ತ ಚಾಲನೆ..!

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ನಿರ್ಮಾಣಗೊಂಡಿರುವ ಎಜಿಎಂ ಇಂಜಿನಿಯರಿಂಗ್ ಕಾಲೇಜ್ ಲೋಕಾರ್ಪಣೆಯನ್ನು ರಾಜ್ಯಪಾಲರಾದ ಥಾವರಚಂದ್ರ ಗೆಹ್ಲೋಟ್ ಹಾಗೂ ಬಿಜೆಪಿಯ ರಾಷ್ಟ್ರೀಯ ಮಹಾಸಚಿವ ಬಿ.ಎಲ್‌. ಸಂತೋಷ್ ವಿದ್ಯುಕ್ತವಾಗಿ ಚಾಲನೆ ನೀಡಿದರು.

ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಶಮನೇವಾಡಿಯಲ್ಲಿ ನೂತನವಾಗಿ ನಿರ್ಮಿಸಿದ ಎಜಿಎಂ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆ, ಶಿಲಾನ್ಯಾಸ ಲೋಕಾರ್ಪಣೆ, 151 ಅಡಿ ಎತ್ತರದ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಯ ಸ್ಥಾಪನೆಯ ಭೂಮಿ ಶುದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನೂ ಕಾಲೇಜಿನ ಒಳಾಂಗಣದಲ್ಲಿ ಸ್ಥಾಪನೆ ಮಾಡಲಾಗಿರುವ ಸರಸ್ವತಿ ಮೂರ್ತಿಯ ಉದ್ಘಾಟನೆಯನ್ನು ನೆರವೇರಿಸುವ ಮೂಲಕ ವಿಶೇಷ ಗೌರವ ಸಮರ್ಪಣೆ ಮಾಡಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/05/2026 12:58 pm

Cinque Terre

25.32 K

Cinque Terre

0

ಸಂಬಂಧಿತ ಸುದ್ದಿ