ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಚಕ್ಕಡಿ ರಸ್ತೆ ಹರಿಕಾರನಿಗೆ ಕೃಷಿ ಮಂತ್ರಿ ಸ್ಥಾನ ನೀಡುವಂತೆ ನಾಗರಿಕರಿಂದ ಒತ್ತಾಯ

ಅಣ್ಣಿಗೇರಿ: ಚಕ್ಕಡಿ ರಸ್ತೆ ಹರಿಕಾರ, ಕಳಸಾ ಬಂಡೂರಿ ರೈತ ಹೋರಾಟಗಾರ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಕೋನರಡ್ಡಿ ಅವರಿಗೆ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಕೃಷಿ ಮಂತ್ರಿ ಸ್ಥಾನ ನೀಡುವಂತೆ, ಪಟ್ಟಣದಲ್ಲಿ ಅಂಜುಮನ್ ಸಂಸ್ಥೆ, ಕೆಲ ಸದಸ್ಯರು ಸೇರಿದಂತೆ ರೈತಪರ ಹೋರಾಟಗಾರರು ಪಟ್ಟಣದಲ್ಲಿ ಆಗ್ರಹಿಸಿದರು.

ಇದೇ ವೇಳೆ ಪುರಸಭೆಯ ಅಧ್ಯಕ್ಷ ಶಿವಾನಂದ ಬೆಳಹಾರ್ ಮಾತನಾಡಿ, ಅಣ್ಣಿಗೇರಿ ಅಭಿವೃದ್ಧಿಗಾಗಿ ಶಾಸಕರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ರೈತರಿಗೆ ಚಕ್ಕಡಿ ರಸ್ತೆಗಳನ್ನು ನಿರ್ಮಾಣ ಮಾಡಿ,ರೈತರಿಗೆ ಜಮೀನುಗಳಿಗೆ ಸರಳವಾಗಿ ಹೋಗಿ ಬರಲು ಸಹಾಯ ಮಾಡಿದ್ದಾರೆ, ಅವರು ಕೃಷಿ ಮಂತ್ರಿ ಆದರೆ ಈ ಕ್ಷೇತ್ರದ ರೈತರಿಗೆ ಅಲ್ಲದೆ ನಾಡಿನ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಈ ವೇಳೆ ನಾಗರಾಜ ದಳವಾಯಿ, ಬಾಬಾಜಾನ್ ಮುಲ್ಲಾ, ಈಶ್ವರ ಕಾಳಪ್ಪನವರ,ತಿಪ್ಪಣ್ಣ ಕೊರವರ, ಫಕ್ರು ಅಲಿ ಲೋಕಪುರಿ, ಮುನ್ನ ಕಾಗದ, ಮೋದಿನಸಾಬ್ ಮುಳುಗುಂದ, ಬಾಸು ಸಾಬ್ ನವಲಗುಂದ, ಹಸನ್ ಸಾಬ್ ಗೂಡು ನಾಯ್ಕರ, ನೂರ್ ಸಾಬ್ ಸುಂಕದ, ಬುಡ್ನಾಸಾಬ್ ನಡ ಕಟ್ಟಿನ, ಮಾಬು ಸಾಬ್ ಕುದ್ದಣ್ಣವರ್, ಶಿವಪುತ್ರಪ್ಪ ನಾಯ್ಕರ್, ಮಲ್ಲಿಕಾರ್ಜುನ್ ಬಳ್ಳೊಳ್ಳಿ, ಸಲೀಂ ಅಗಸಿ ಬಾಗಿಲ, ಶ್ರೀಕಾಂತ ಕೋಳಿವಾಡ,ಚಂದು ಸಾಬ್ ಧಾರವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/06/2026 09:12 am

Cinque Terre

24.43 K

Cinque Terre

0

ಸಂಬಂಧಿತ ಸುದ್ದಿ