ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾರ್ವಜನಿಕರ ಹಣ ಲೂಟಿ: 2 ಕೋಟಿ ರಸ್ತೆ ನಿರ್ಮಿಸಿ, ಮತ್ತೆ ಅಗೆದು ಚರಂಡಿ ನಿರ್ಮಾಣ!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದರು ಅಭಿವೃದ್ಧಿ ಮಾತ್ರ ಹೇಳಿಕೊಳ್ಳುವಂತೆ ಆಗುತ್ತಿಲ್ಲ. ಇದರ ಬದಲಾಗಿ ಜನರ ಕೋಟಿ ಕೋಟಿ ತೆರಿಗೆ ಹಣವನ್ನು ಲೂಟಿ ಮಾಡುವ ಪ್ರಯತ್ನಗಳೇ ಹೆಚ್ಚಾಗುತ್ತಿವೆ. ಇದಕ್ಕೆ ಉದಾಹರಣೆಯೇ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಎರಡು ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಒಳಚರಂಡಿ ನಿರ್ಮಾಣ ಮಾಡಿ ರಸ್ತೆ ಮಾಡಬೇಕಿದ್ದ ಅಧಿಕಾರಿಗಳು. ಬೇಜವಾಬ್ದಾರಿಯಿಂದ ಮೊದಲು ರಸ್ತೆ ನಿರ್ಮಾಣ ಮಾಡಿ, ಇದೀಗ ಅದೇ ರಸ್ತೆಯನ್ನು ಅಗೆದು ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು,,, ಹುಬ್ಬಳ್ಳಿ ವೀರಾಪುರ ಓಣಿ ಎರಡೆತ್ತಿನ ಮಠದ ಎದುರಿಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆಗಳನ್ನು ಅಗೆದ ಅಧಿಕಾರಿಗಳು ಸಾರ್ವಜನಿಕರ ಹಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಿಶೇಷ ಅನುದಾನದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವೀರಾಪುರ ಓಣಿಯಿಂದ ಯಲ್ಲಾಪುರ ಓಣಿವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸ್ಥಳೀಯರು, ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಹೀಗಾಗಿ ಮೊದಲು ಒಳಚರಂಡಿ ನಿರ್ಮಾಣ ಮಾಡಿ, ನಂತರ ಸಿಸಿ ರಸ್ತೆ ನಿರ್ಮಾಣ ಮಾಡಿ ಅಂತ ಪಾಲಿಕೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದ್ದರಂತೆ. ಆದ್ರೆ ಅಂದು ಸಾರ್ವಜನಿಕರ ಮಾತು ಪರಿಗಣಿಸದ ಅಧಿಕಾರಿಗಳು ಒಳಚರಂಡಿ ಮಾಡದೇ ಸಿಸಿ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿಸಿ ರಸ್ತೆಯನ್ನು ಇದೀಗ ಏಕಾಏಕಿ ಅಗೆದು ಒಳಚರಂಡಿ ಮಾಡ್ತಿದ್ದಾರೆ. ಈ ಸಾರ್ವಜನಿಕರ ಹಣದ ಲೂಟಿ ಮಾಡಿರೋದರ ಬಗ್ಗೆ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಬೈಟ್: ಜ್ಯೋತಿ ಪಾಟೀಲ್, ಹು-ಧಾ ಪಾಲಿಕೆ ಮೇಯರ್.

ಸದ್ಯ ಈಗಾಗಲೇ ನಿರ್ಮಾಣವಾದ ಸಿಸಿ ರಸ್ತೆಗೆ ಒಳಚರಂಡಿಗಾಗಿ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಸಿಸಿ ರಸ್ತೆಯನ್ನು ಅಗೆದು ಈಗ ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಏನೇ ಅಭಿವೃದ್ಧಿ ಮಾಡಬೇಕಾದ್ರೆ ಮೊದಲಿಗೆ ಒಳಚರಂಡಿ, ಕರೆಂಟ್ ಲೈನ್ ಎಲ್ಲವನ್ನು ಮಾಡಿ ನಂತರ ರಸ್ತೆ ನಿರ್ಮಾಣ ಮಾಡಿ. ಬೇಕಾಬಿಟ್ಟಿಯಾಗಿ ಹಣ ಬರುತ್ತದೆಂದು ಲೂಟಿ‌ ಮಾಡುವುದನ್ನು ಬಿಡಬೇಕು. ಚೆನ್ನಾಗಿ ಅಭಿವೃದ್ಧಿ ಮಾಡಬೇಕಾಗಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/06/2026 06:15 pm

Cinque Terre

19.73 K

Cinque Terre

5

ಸಂಬಂಧಿತ ಸುದ್ದಿ