ಬೆಳಗಾವಿ : ಇಲ್ಲಿನ ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯು ತನ್ನ ಕಿರೀಟದಲ್ಲಿ ಮತ್ತೊಂದು ವರ್ಣರಂಜಿತ ಗರಿಯಾಗಿ ಸಿದ್ಧರಾಮೇಶ್ವರ ಸಿ ಬಿ ಎಸ್ ಇ ಶಾಲೆಯನ್ನು ಆರಂಭಿಸಿದ್ದು, ಅದರ ಲೋಕಾರ್ಪಣೆ ಜೂನ್ 1 ರಂದು ನೆರವೇರಲಿದೆ. ಶಿಕ್ಷಣ ಹಾಗೂ ಸಮಾಜ ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತೊಂದು ಮೈಲುಗಲ್ಲನ್ನು ಸಾಧಿಸುವತ್ತ ನಾಗನೂರು ರುದ್ರಾಕ್ಷಿ ಮಠ ಹೆಜ್ಜೆ ಇಟ್ಟಿದೆ.
ಜೂನ್ 1 ರಂದು ಜರುಗುವ ಶಾಲೆಯ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ.
ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಶಾಲೆಯ ಲೋಕಾರ್ಪಣೆಗೊಳಿಸಲಿದ್ದು, ಪೊದಾರ ಇಂಟರ್ನ್ಯಾಶನಲ್ ಶಾಲೆಯ ಪ್ರಾಂಶುಪಾಲ ರಾಜ್ ಹುಲಮನಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್. ಪಿ. ಹಿರೇಮಠ, ಪ್ರಾಚಾರ್ಯ ಡಾ. ಸಿ. ಬಿ. ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
PublicNext
31/05/2026 09:31 pm
LOADING...