ಚಿಕ್ಕೋಡಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ವರೂರು ಗ್ರಾಮವನ್ನು ನವಗ್ರಹ ತೀರ್ಥ ಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮಹಾರಾಜರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಈಗ ತಮ್ಮ ಜನ್ಮಭೂಮಿಯಾಗಿರುವ ಶಮನೇವಾಡಿಯಲ್ಲಿ ಈಗ ಶೈಕ್ಷಣಿಕ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬುವಂತೇ, ನೂತನ ಇಂಜಿನಿಯರಿಂಗ್ ಕಾಲೇಜ್ ನಿರ್ಮಾಣ ಮಾಡಿದ್ದಾರೆ.
ಶಮನೇವಾಡಿಯಲ್ಲಿ ನೂತನ ಇಂಜಿನಿಯರಿಂಗ್ ಕಾಲೇಜಿನ ಲೋಕಾರ್ಪಣೆಗೆ ಈಗ ದಿನಗಣನೆ ಆರಂಭವಾಗಿದ್ದು, ಕಾಲೇಜಿನ ಉದ್ಘಾಟನೆಯ ಎರಡನೇ ದಿನವಾದ ಸೋಮವಾರ ಹಲವಾರು ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿದ್ದು, ಪಂಚಕಲ್ಯಾಣ, ಅರ್ಘ್ಯ, ಜಾಪ್ಯಾ ಹೀಗೆ ಹಲವಾರು ಆಚರಣೆ ಜೊತೆಗೆ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗೆ ವಿಶೇಷ ಪೂಜೆ ಗೌರವ ನಮನ ಸಲ್ಲಿಸಲಾಯಿತು.
ಇನ್ನೂ ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಕ್ತರು ಭಾಗವಹಿಸಿದ್ದು, ಆಗಮಿಸಿದ ಗಣ್ಯರಿಗೆ ಹಾಗೂ ಗೌರವಾನ್ವಿತ ಅತಿಥಿಗಳಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಎರಡನೇ ದಿನದ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.
PublicNext
25/05/2026 07:50 pm
LOADING...