ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಕಣ್ಮನ ಸೆಳೆದ ದೀಪಾಲಂಕಾರ: ಶಮನೇವಾಡಿಯಲ್ಲಿ ಝಗಮಗಿಸಿದ ಬೆಳಕು..!

ಚಿಕ್ಕೋಡಿ: ಶಮನೇವಾಡಿ ಈಗ ಬಹುದೊಡ್ಡ ಬೆಳಕಿನ ಸಂಚಲನ ಉಂಟಾಗಿದೆ. ಎಜಿಎಂ ಕಾಲೇಜಿನ ಲೋಕಾರ್ಪಣೆ ಹಾಗೂ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಯ ನಿರ್ಮಾಣಕ್ಕೆ ಭೂಮಿ ಶುದ್ಧಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೀಪಾಲಂಕಾರ ಜೋರಾಗಿದೆ.

ಎಲ್ಲೆಡೆಯೂ ಝಗಮಗಿಸುವ ದೀಪದ ಬೆಳಕಿನಲ್ಲಿ ವೇದಿಕೆ ಹಾಗೂ ಕಾಲೇಜಿನ ಆವರಣ ಸಂಭ್ರಮದಿಂದ ಕಳೆಗಟ್ಟಿರುವುದ ನಿಜಕ್ಕೂ ನೋಡುಗರ ಕಣ್ಮನ ಸೆಳೆದಿದೆ.

ಹೌದು.. ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಬಹುದೊಡ್ಡ ಸಂಭ್ರಮದ ಹಿನ್ನೆಲೆಯಲ್ಲಿ ಅದ್ಭುತ ಹಾಗೂ ಅತ್ಯಾಕರ್ಷಕ ರೀತಿಯಲ್ಲಿ ಅಲಂಕಾರ ಮಾಡಿದ್ದು, ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

Edited By : Shivu K
PublicNext

PublicNext

25/05/2026 10:49 pm

Cinque Terre

11.51 K

Cinque Terre

0

ಸಂಬಂಧಿತ ಸುದ್ದಿ