ಬೆಳಗಾವಿ: ಚರಂಡಿಯಲ್ಲಿನ ಹೂಳೆತ್ತಿರುವ ಪಾಲಿಕೆ ರಸ್ತೆ ಮೇಲೆ ಎಸೆದು ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದೆ. ಜೊತೆಗೆ ಅದೇ ಸ್ಥಳದಲ್ಲಿ ಸಿಕ್ಕಾಪಟ್ಟೆ ಕಸ ಬಿದ್ದಿದ್ದು, ಪಾಲಿಕೆ ವಿರುದ್ಧ ಯುವಕರು ಸಿಡಿದೆದ್ದಿದ್ದಾರೆ.
ಹೌದು.. ಬೆಳಗಾವಿಯ ನ್ಯೂ ವೈಭವ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮೇಲೆ ಪದೇ ಪದೇ ರಾಶಿ ರಾಶಿ ಕಸ ಬೀಳುತ್ತಿದ್ದು ಮಹಾನಗರ ಪಾಲಿಕೆ ಪ್ರತಿ ನಿತ್ಯ ಕಸ ಸಂಗ್ರಹಿಸಲು ಬಾರದೆ ಇರುವ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಇದೇ ರಸ್ತೆ ಪಕ್ಕದಲ್ಲಿ ಇರುವ ಚರಂಡಿಯ ಹೂಳು ತೆಗೆದು ವಾಹನದಲ್ಲಿ ತುಂಬಿ ಬೇರೆ ಕಡೆ ಸಾಗಿಸುವ ಬದಲಾಗಿ ಪಾಲಿಕೆ ಸಿಬ್ಬಂದಿ ರಸ್ತೆ ಮೇಲೆ ಬಿಟ್ಟು ಹೋಗಿದ್ದಾರೆ. ಇದರಿಂದ ಬರುವ ಹೋಗುವ ಪಾದಚಾರಿಗಳಿಗೆ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಕಸದಿಂದ ದುರ್ನಾತ ಉಂಟಾಗಿ ನಾಯಿಗಳ ಹಾವಳಿಯು ಹೆಚ್ಚಾಗಿದೆ. ಬರೋ ಹೋಗೋ ಜನರಿಗೆ ನಾಯಿಗಳು ದಾಳಿ ಮಾಡುತ್ತಿವೆ.
ಇನ್ನು ಈ ಎಲ್ಲಾ ಸಮಸ್ಯೆಗೆ ಪ್ರಮುಖ ಕಾರಣ ಎಂದರೆ ಇಲ್ಲೇ ಪಕ್ಕದಲ್ಲಿ ಪಾರ್ಟಿ ಹಾಲ್ ಇರುವುದು. ಈ ಪಾರ್ಟಿ ಹಾಲ್ ನಿಂದ ಬರುವ ತ್ಯಾಜ್ಯ ಎಲ್ಲಾ ಚರಂಡಿಯಲ್ಲಿ ಎಸೆಯಲಾಗುತ್ತಿದೆ. ಇದರಿಂದ ಚರಂಡಿ ಬ್ಲಾಕ್ ಆಗುತ್ತಿದೆ. ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ನ್ಯೂ ವೈಭವ್ ನಗರದ ಕೆಲ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಬಂದರೆ ಕೆಲ ಪ್ರದೇಶ ಬಿಕೆ ಕಂಗ್ರಾಳಿ ಗ್ರಾಂ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತೆ. ಹಾಗಾಗಿ ಗೊಂದಲ ನಿರ್ಮಾಣವಾಗಿ ಕಸ ವಿಲೇವಾರಿಯಲ್ಲಿ ಸಮಸ್ಯೆಯಾಗುತ್ತಿದೆ.
ಒಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನ್ಯೂ ವೈಭವ ನಗರದ ನಿವಾಸಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕಸದ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಈ ರೀತಿ ನಿರ್ಲಕ್ಷ್ಯ ವಹಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಲ್ಹಾದ ಪೂಜರಿ, ಪಬ್ಲಿಕ್ ನೆಕ್ಸ್ಟ್,
PublicNext
01/06/2026 11:27 am
LOADING...