ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಕಳವು ಆರೋಪಿಗಳ ಬಂಧನ - ಚಿನ್ನಾಭರಣ ವಶ

ಹೆಬ್ರಿ : ಹೆಬ್ರಿಯ ಅನಂತನಗರ ಕೃಷ್ಣಪ್ರಭು ಅವರ ಮನೆಯಿಂದ ಚಿನ್ನಾಭರಣ ಕಳ್ಳತನವಾದ ಘಟನೆಯ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಮಿಜಾರು ಎಂಬಲ್ಲಿ ಕಳ್ಳರನ್ನು ಹಿಡಿದು ಅವರಲ್ಲಿರುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ತಂಡದಲ್ಲಿದ್ದ ಓರ್ವನ ಶೋಧ ಮುಂದುವರಿದಿದೆ. ಪ್ರಮುಖ ಆರೋಪಿ ತಮಿಳುನಾಡು ಮೂಲದ ಕೇರಳದಲ್ಲಿ ವಾಸವಾಗಿರುವ ಸಲೀಂ, ಮೂಡುಬಿದಿರೆ ಹರೀಶ್, ಕೇರಳದ ಸಫಾದ್ ಬಂಧಿತರು. ಅವರಿಂದ ಚಿನ್ನ ಬೆಳ್ಳಿ ಹಾಗೂ ಹವಳವನ್ನು ವಶಪಡಿಸಿಕೊಳ್ಳಲಾಗಿದೆ.

Edited By : Nirmala Aralikatti
Kshetra Samachara

Kshetra Samachara

01/06/2026 11:41 am

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ