ಬ್ರಹ್ಮಾವರ: ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರವಿರುವ ಹೊತ್ತಿನಲ್ಲಿ, ಹಣ ಕೊಟ್ಟು ಬಾಟಲಿ ನೀರು ಖರೀದಿಸುವ ಈ ಕಾಲದಲ್ಲಿ ಸಮಾಜಸೇವೆ ಹೀಗೂ ಮಾಡಬಹುದು ಎಂಬುದಕ್ಕೆ ಬ್ರಹ್ಮಾವರದ ನಿವೃತ್ತ ಅಂಚೆ ಪಾಲಕ ನಯಂಪಳ್ಳಿ ದಯಾನಂದ ಪೂಜಾರಿಯವರು ಮಾದರಿಯಾಗಿದ್ದಾರೆ.
ಬಿರ್ತಿ ಬಳಿಯಲ್ಲಿ ವಾಸವಾಗಿರುವ ದಯಾನಂದ ಪೂಜಾರಿಯವರು ತಮ್ಮ ಮನೆಯಲ್ಲೇ ಇರುವ ಬಾವಿಯ ನೀರನ್ನು ಪೈಪ್ ಮೂಲಕ ಅಕ್ಕಪಕ್ಕದ ಬಡ ಕುಟುಂಬಗಳಿಗೆ ಪ್ರತಿದಿನ ಉಚಿತವಾಗಿ ನೀಡಿ ಜೀವಜಲದ ಮಹಾದಾನಿಯಾಗಿದ್ದಾರೆ.
ಇಲ್ಲಿನ ಪರಿಸರದಲ್ಲಿ ಉತ್ತರ ಕರ್ನಾಟಕ ಭಾಗದಿಂದ ವಲಸೆ ಬಂದ ಅನೇಕ ಕೂಲಿ ಕಾರ್ಮಿಕರು ಚಿಕ್ಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.
ಕುಡಿಯಲು ಹಾಗೂ ಇತರೆ ಅಗತ್ಯಗಳಿಗಾಗಿ ಇವರು ದೂರದಲ್ಲಿರುವ ಸರ್ಕಾರಿ ತೆರೆದ ಬಾವಿಯಿಂದ ರಾತ್ರಿ ಹೊತ್ತು ನೀರು ತರುತ್ತಿದ್ದರು. ವಲಸೆ ಕಾರ್ಮಿಕರ ಈ ಕಷ್ಟವನ್ನು ಮನಗಂಡ ದಯಾನಂದರು, ತಮ್ಮ ಮನೆಯಲ್ಲಿ ಇರುವ ತೆರೆದ ಬಾವಿಯಿಂದ ಪ್ರತಿ ದಿನ ಪೈಪ್ ಮೂಲಕ ಜನರಿಗೆ ಜೀವಜಲದ ಮಹಾದಾನಿಯಾಗಿದ್ದಾರೆ.
ಪ್ರತಿದಿನ, ಸರತಿಯ ಸಾಲಿನಲ್ಲಿ ಹಲವಾರು ಪಾತ್ರೆಗಳನ್ನು ಇಟ್ಟು ನೀರು ಕೊಂಡೊಯ್ಯುವ ಜನರು ದಯಾನಂದರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.
PublicNext
01/06/2026 09:02 pm
LOADING...