ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿನಾಯಿಗಳ ಫೇವರಿಟ್ ಪರ್ಸನ್ - ಮಂಜುಳ ಕರ್ಕೇರರ ಸೇವೆಗೊಂದು ಸಲಾಂ

ಇವರು ಮಂಜುಳಾ ಕರ್ಕೇರಾ, ಇವರ ಕಾರು ಬರುತ್ತಿರುವುದನ್ನು ಕಂಡ ತಕ್ಷಣವೇ ಬೀದಿ ನಾಯಿಗಳು ಓಡಿಬಂದು ಸುತ್ತುವರಿಯುತ್ತವೆ. ಕಾರಣ, ಅವುಗಳಿಗೆ ಗೊತ್ತು — ಇಂದು ಹೊಟ್ಟೆ ತುಂಬಿಸುವ ಊಟ ಬರುತ್ತಿದೆ ಎಂದು. ಪ್ರಾಣಿಗಳ ಮೇಲಿನ ಅಪಾರ ಪ್ರೀತಿ ಮತ್ತು ಕಾಳಜಿಯಿಂದ ಮಂಜುಳ ಕರ್ಕೇರ ಅವರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಾ, ಅವುಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರತಿದಿನ ನೂರಾರು ನಾಯಿಗಳಿಗೆ ಆಹಾರ ನೀಡುವ ಅವರು, ರಸ್ತೆಬದಿಯಲ್ಲಿ ಸಂಕಷ್ಟದಲ್ಲಿರುವ ನಾಯಿಗಳ ರಕ್ಷಣೆಯ ಜೊತೆಗೆ ಅವುಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕಾಗಿ ಶಸ್ತ್ರಚಿಕಿತ್ಸೆ (ಆಪರೇಷನ್) ಮಾಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಇದರಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುವುದರ ಜೊತೆಗೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ಜನರು ದೂರು ನೀಡುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಸಾಕಿದ ನಾಯಿಗಳನ್ನು ಬೀದಿಗೆ ಬಿಟ್ಟುಬಿಡುವುದೂ ಮನುಷ್ಯರೇ. ಹಾಗಾಗಿ ನಾಯಿಗಳನ್ನು ಬೀದಿಗೆ ತಳ್ಳುವ ಬದಲು, ಅವುಗಳ ಆಪರೇಷನ್ ಮತ್ತು ಆರೈಕೆಗೆ ಒತ್ತು ನೀಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು” ಎಂದು ಮಂಜುಳ ಪ್ರಶ್ನಿಸುತ್ತಾರೆ.

ಇದರ ಜೊತೆಗೆ, ಸಮಯಕ್ಕೆ ಸರಿಯಾಗಿ ನಾಯಿಗಳಿಗೆ ಲಸಿಕೆ ಹಾಕಿಸುವ ಕೆಲಸವನ್ನೂ ಅವರು ಮಾಡಿಸುತ್ತಿದ್ದಾರೆ. “ನಮಗೆಲ್ಲಾ ಬದುಕಲು ಬೇಕಾದ ಸೌಲಭ್ಯಗಳಿವೆ. ಆದರೆ ಈ ಮೂಕ ಜೀವಿಗಳಿಗೆ ಒಂದು ಹೊತ್ತಿನ ಊಟವೂ ಸಿಗದೆ ಕಷ್ಟಪಡುವ ಪರಿಸ್ಥಿತಿ ಇದೆ. ನಾವು ಒಂದು ಹೊತ್ತು ಊಟ ಕೊಟ್ಟರೆ ಅವು ಬದುಕಿಕೊಳ್ಳುತ್ತವೆ” ಎಂಬುದು ಮಂಜುಳ ಅವರ ಮಾನವೀಯ ನಿಲುವು.

ಮೂಕ ಜೀವಿಗಳ ಮೇಲಿನ ಕರುಣೆ, ಸೇವಾ ಮನೋಭಾವ ಮತ್ತು ಸಮಾಜದ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಂಜುಳ ಕರ್ಕೇರ ಅವರು ಇಂದು ಅನೇಕ ಪ್ರಾಣಿಗಳ ಪಾಲಿಗೆ ಆಶಾಕಿರಣವಾಗಿದ್ದಾರೆ. ಅವರ ಸೇವೆ ಇತರರಿಗೂ ಸ್ಫೂರ್ತಿಯಾಗಲಿ ಎಂಬುದು ಹಲವರ ಆಶಯ.

Edited By : Shivu K
PublicNext

PublicNext

02/06/2026 09:46 pm

Cinque Terre

4.54 K

Cinque Terre

1

ಸಂಬಂಧಿತ ಸುದ್ದಿ