ಹುಬ್ಬಳ್ಳಿ: ಡಿಎಲ್ಆರ್ ಎಂ ಜೈ ಹನುಮಾನ್ ಫೌಂಡೇಶನ್ ಹಾಗೂ ಡಾ. ರಮೇಶ್ ಅಣ್ಣಾ ಗೆಳೆಯರ ಬಳಗದಿಂದ ಸಮಾಜ ಸೇವಕ ಡಾ. ರಮೇಶ್ ಮಹದೇವಪ್ಪನವರ ಜನ್ಮದಿನದ ಕಾರ್ಯಕ್ರಮದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಶೋಕ ವಾಲ್ಮೀಕಿ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 4ರ ಜನ್ಮದಿನದಂದು ವಿದ್ಯಾನಗರದಲ್ಲಿ ರಕ್ತದಾನ ಶಿಬಿರ, ಚಿಟಗುಪ್ಪಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ, ಶ್ರೀ ಸಿದ್ಧಾರೂಢಮಠ ಹಾಗೂ ಸೈಯದ್ ಪತೇಶಾ ದರ್ಗಾ ಸುತ್ತಮುತ್ತಲಿನ ಬಡವರಿಗೆ ಪಲಾವ್ ಮತ್ತು ನೀರು ವಿತರಣೆ, ನಗರದ ರೈಲ್ವೆ ನಿಲ್ದಾಣದ ಬಳಿ ಸರ್ಕಾರಿ ಪ್ರಾಥಮಿಕ ಮಕ್ಕಳ ಶಾಲೆಯಲ್ಲಿ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ, ಇಂದಿರಾ ಗಾಜಿನ ಮನೆ ಮತ್ತು ಹೊಸೂರ ಬಳಿ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ, ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣ ಬಳಿ ಬೆಡ್ ಶೀಟ್ ವಿತರಣೆ ಇರಲಿದೆ.
ಅಂದು ನಗರದ ಉಣಕಲ್ ವೃತ್ತದಿಂದ ಬೈಕ್ ರ್ಯಾಲಿ ಮುಖಾಂತರ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ವೃತ್ತದ ಬಳಿ ಗೆಳೆಯರ ಬಳಗದಿಂದ ಕೇಕ್ ಕಟ್ ಮಾಡುವ ವೇದಿಕೆ ಕಾರ್ಯಕ್ರಮ ಇರಲಿದೆ ಎಂದರು.
Kshetra Samachara
02/06/2026 04:14 pm
LOADING...