ಧಾರವಾಡ: ಸಂತೋಷ ಲಾಡ್ ಅವರು ಮತ್ತೊಮ್ಮೆ ಸಚಿವರಾಗಿ ಮುಂದುವರೆಯಬೇಕು. ಅವರು ಬಡವರಪರ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಅವರು ಡಿಕೆಶಿ ಅವರ ಸಂಪುಟದಲ್ಲೂ ಸಚಿವರಾಗಿ ಮುಂದುರೆಯಬೇಕು ಎಂದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಮೋರೆ ಆಗ್ರಹಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲೇ ಮರಾಠಾ ಸಮಾಜದ ಸುಮಾರು 60 ಲಕ್ಷ ಜನಸಂಖ್ಯೆ ಇದೆ. ನಮ್ಮ ಸಮಾಜಕ್ಕೆ ಸೇರಿದ ಇಬ್ಬರು ಶಾಸಕರಿದ್ದಾರೆ. ಅದರಲ್ಲಿ ಸಂತೋಷ ಲಾಡ್ ಅವರು ಈಗಾಗಲೇ ಸಚಿವರಿದ್ದರು. ಮುಂದೆಯೂ ಅವರನ್ನು ಸಚಿವರಾಗಿಯೇ ಮುಂದುವರೆಸಬೇಕು ಎಂದು ಮೋರೆ ಆಗ್ರಹಿಸಿದರು.
ಹಾನಗಲ್ ಶಾಸಕರಾದ ಶ್ರೀನಿವಾಸ ಮಾನೆ ಅವರೂ ನಮ್ಮ ಮಾರಾಠಾ ಸಮಾಜಕ್ಕೆ ಸೇರಿದವರಾಗಿದ್ದು, ಅವರಿಗೂ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಮೋರೆ ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2026 04:40 pm
LOADING...