ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಅಮ್ಮನ ವಾತ್ಸಲ್ಯಕ್ಕೆ ಗಡಿ ಇಲ್ಲ - ಪ್ರತಿ ಮಗುವಿಗೂ ಮಾತೃತ್ವದ ಸಿಂಚನ

"ಅಮ್ಮನ ವಾತ್ಸಲ್ಯಕ್ಕೆ ಗಡಿ ಇಲ್ಲ' ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಪ್ರಪಂಚದ ಯಾವುದೇ ಭಾಷೆ, ಧರ್ಮ ಅಥವಾ ದೇಶದ ಎಲ್ಲೆಗಳನ್ನು ಮೀರಿ ನಿಲ್ಲುವ ಏಕೈಕ ನಿರ್ಮಲ ಹಾಗೂ ನಿಸ್ವಾರ್ಥ ಪ್ರೀತಿಯೆಂದರೆ ಅದು ತಾಯಿಯ ವಾತ್ಸಲ್ಯ.

ತಾಯಿಯ ವಾತ್ಸಲ್ಯ ಕೇವಲ ತನ್ನ ಮಕ್ಕಳಿಗಷ್ಟೇ ಮೀಸಲಾಗಿರುವುದಿಲ್ಲ, ಬದಲಿಗೆ, ಪ್ರತಿಯೊಬ್ಬ ಮಗುವನ್ನೂ ತನ್ನದೇ ಮಗುವಿನಂತೆ ಪ್ರೀತಿಸುತ್ತಾಳೆ.

ಮಕ್ಕಳ ಬೆಳವಣಿಗೆಗಾಗಿ ತಾನು ನಿದ್ರೆಯಿಲ್ಲದೆ, ಅದೆಷ್ಟೋ ಕಷ್ಟಗಳನ್ನು ಅನುಭವಿಸಿ, ತನ್ನ ಇಡೀ ಜೀವನವನ್ನೇ ಮುಡಿಪಾಗಿಡುತ್ತಾಳೆ. ಯಾವುದೇ ಪ್ರತಿಫಲವನ್ನು ಬಯಸದೆ, ತನ್ನ ಮಗುವು ಎಷ್ಟೇ ದೂರದಲ್ಲಿದ್ದರೂ ಅಥವಾ ಎಂಥಹುದೇ ಪರಿಸ್ಥಿತಿಯಲ್ಲಿದ್ದರೂ, ಆಕೆಯ ಆಶೀರ್ವಾದ ಮತ್ತು ಪ್ರೀತಿ ಸದಾ ನೆರಳಾಗಿರುತ್ತದೆ. ಆಕೆಯ ಮಡಿಲು ಎಲ್ಲಾ ನೋವುಗಳನ್ನು ಮರೆಸುವ ಸುರಕ್ಷಿತ ತಾಣ.

ಸದ್ಯ ಅಂತಹದ್ದೇ ಅಮ್ಮನ ವಾತ್ಸಲ್ಯದ ಒಂದು ಮನಮಿಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಹೆತ್ತ ಮಗುವನ್ನು ಕಂಕುಳಲ್ಲಿಟ್ಟುಕೊಂಡು ನಿಂತಿದ್ದ ತಾಯಿಯ ಬಳಿ, ಮತ್ತೊಬ್ಬರ ಮಗು ಪ್ರೀತಿಯ ಆಸರೆಯ ನಿರೀಕ್ಷೆಯಲ್ಲಿ ಬಂದಾಗ, ತಾಯಿ ಮನಸ್ಸು ಕರಗಿ ನಿರ್ಮಲ ವಾತ್ಸಲ್ಯವನ್ನು ತೋರಿದ್ದಾಳೆ. ಈ ದೃಶ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Edited By : Abhishek Kamoji
PublicNext

PublicNext

02/06/2026 05:40 pm

Cinque Terre

19.36 K

Cinque Terre

0

ಸಂಬಂಧಿತ ಸುದ್ದಿ