ಬೆಂಗಳೂರು: ಕೆಂಪೇಗೌಡ ಜಯಂತಿ ದಿನ ಮ್ಯಾರಥಾನ್ ಯೋಜನೆ ಸಂಬಂಧ ಡಾ.ಕೆ ಸುಧಾಕರ್ ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಪ್ರೆಸ್ ಮೀಟ್ ನಡೆಸಿದ್ದಾರೆ. ಪ್ರಾಮಾಣಿಕ ಕಾರ್ಯಕರ್ತರ ಬೆಂಬಲಕ್ಕೆ ನಾನು ಸಿದ್ಧ ಎಂದು ಸುಧಾಕರ್ ಹೇಳಿದ್ದಾರೆ, ಹೀಗಾಗಿ ಈ ವೇಳೆ ಶಾಸಕ ವಿಶ್ವನಾಥರನ್ನ ಬಿಟ್ಟು ಪ್ರೆಸ್ ಮೀಟ್ ಸರಿಯಲ್ಲವೆಂದು ವಿಶ್ವನಾಥ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಕೆ.ಸುಧಾಕರ್ ಮುಂದೆ ಗಲಾಟೆ ನಡೆಸಿದ್ದಾರೆ. ಇನ್ನೂ ಗಲಾಟೆ ಗದ್ದಲ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಬಿಜೆಪಿಯಲ್ಲಿ ಸಂಸದ ಮತ್ತು ಶಾಸಕರ ನಡುವೆ ಬಿಗ್ ಬೈಟ್ ನಡೆದಿದೆ.ಯಲಹಂಕ ಶಾಸಕ ವಿಶ್ವನಾಥ್ ಮತ್ತು ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ನಡುವೆ ವಾರ್ ನಡೆದಿದ್ದು,ಪ್ರೆಸ್ ಮೀಟ್ ಮಾಡಲು ಬಂದ ಸುಧಾಕರ್ ಗೆ ಯಲಹಂಕ ಶಾಸಕ ವಿಶ್ವನಾಥ್ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಿಂದ ಇಬ್ಬರ ನಡುವೆ ಶೀತಲ ಸಮರ ನಡೆದಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶಾಸಕ ವಿಶ್ವನಾಥ್ ಮಗನ ಟಿಕೆಟ್ ಸಂಸದರಾದ ಸುಧಾಕರ್ ತಪ್ಪಿಸಿದರು. ಯಲಹಂಕದಲ್ಲಿ ವಿಶ್ವನಾಥ್ ವಿರುದ್ಧ ಬಮುಲ್ ನಿರ್ದೇಶಕ ಕಡತನಮಲೆ ಸತೀಶ್ ರನ್ನ ಪರ್ಯಾಯ ನಾಯಕನಾಗಿ ಬೆಳೆಸಲು ಹೊರಟಿರುವ ಆರೋಪವಿದೆ. ಅಂದಿನಿಂದ ಸುಧಾಕರ್ ನಡುವೆ ವಿಶ್ವನಾಥ್ ಮುನಿಸುಕೊಂಡಿದ್ದಾರೆ.ಇಂದು ಶಾಸಕ ವಿಶ್ವನಾಥ್ ಬಿಟ್ಟು ಯಲಹಂಕದಲ್ಲಿ ಸುಧಾಕರ್ ಪ್ರೆಸ್ ಮೀಟ್ ನಡೆಸಲು ಮುಂದಾಗಿದ್ದರು. ಈ ವೇಳೆ ವಿಶ್ವನಾಥ್ ಬೆಂಬಲಿಗರು ಎಂಟ್ರಿಯಾಗಿದ್ದಾರೆ. ಸಂಸದರ ಪತ್ರಿಕಾಗೋಷ್ಠಿ ನಡುವೆ ನಿಷ್ಠಾವಂತ ಮತ್ತು ವಲಸಿಗ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಸ್ಥಳಕ್ಕೆ ಯಲಹಂಕ ಪೊಲೀಸರು ಆಗಮಿಸಿ ಸದ್ಯ ಕಾರ್ಯಕರ್ತರನ್ನು ಸಮಾಧಾನಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕಾರ್ಯಕರ್ತರ ವಾಗ್ವಾದದ ನಡುವೆ ಸಂಸದ ಸುಧಾಕರ್ ಸುಮ್ಮನಾಗಿದ್ದಾರೆ.
PublicNext
02/06/2026 07:48 pm