ತುಮಕೂರು: ನಗರದ ಹಿರಿಯ ಕಬಡ್ಡಿ ಆಟಗಾರ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುನಾವರ್ ಪಾಷಾ ಅವರನ್ನು ಅವರ ಸ್ನೇಹ ಬಳಗ ನಗರದಲ್ಲಿ ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಿತು.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುನಾವರ್ ಪಾಷಾ ಹಾಗೂ ಅವರ ಪತ್ನಿ ಶಬೀನ್ ತಾಜ್ ಅವರನ್ನು ಡಿವೈಎಸ್‌ಪಿ ಕೆ.ಆರ್. ಚಂದ್ರಶೇಖರ್ ಮಾತನಾಡಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಾತ್ರಕ್ಕೆ ಅವರು ವಿಶ್ರಾಂತಿಯಲ್ಲಿರಬೇಕು ಎಂದು ಅರ್ಥವಲ್ಲ, ಅವರಲ್ಲಿರುವ ಅನುಭವ, ಚೈತನ್ಯವನ್ನು ಸಮಾಜಕ್ಕೆ ಬಳಸಬೇಕು. ಇಷ್ಟು ವರ್ಷಗಳ ತಮ್ಮ ಸೇವೆಯ ಅನುಭವವನ್ನು ಯುವಕರಿಗೆ ತಿಳಿಸಿ ಮಾರ್ಗದರ್ಶನ ನೀಡಬೇಕು. ಆ ಮೂಲಕ ಇಲಾಖೆಗೆ, ಸಮಾಜಕ್ಕೆ ನೆರವಾಗಬೇಕು ಎಂದು ಹೇಳಿದರು.
ಮುನಾವರ್ ಪಾಷಾ ಅವರು ಕಬಡ್ಡಿ ಆಟಗಾರರಾಗಿ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹೆಸರು ಮಾಡಿದ್ದಾರೆ. ಅವರು ತಮ್ಮ ಆಸಕ್ತಿಯ ಕಬಡ್ಡಿ ಆಟಗಳಲ್ಲಿ ತೊಡಗಿಕೊಂಡು ಯುವ ಪೀಳಿಗೆಯ ಕ್ರೀಡಾಪಟುಗಳಿಗೆ ತರಬೇತಿ, ಮಾರ್ಗದರ್ಶನ ನೀಡಿ, ಚಟುವಟಿಕೆಯಿಂದ ಬದುಕನ್ನು ಕ್ರಿಯಾಶೀಲಗೊಳಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ಚಂದ್ರಶೇಖರ್ ಸಲಹೆ ಮಾಡಿದರು.
ಮತ್ತೊಬ್ಬರು ಡಿವೈಎಸ್‌ಪಿ ಶ್ರೀಧರ ಶಾಸ್ತ್ರಿ, ಸರ್ಕಲ್ ಇನ್ಸ್ಪೆಕ್ಟರ್‌ಗಳಾದ ಅವಿನಾಶ್, ರಾಘವೇಂದ್ರ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ. ಧನಿಯಾಕುಮಾರ್, ನಗರಪಾಲಿಕೆ ಮಾಜಿ ಮೇಯರ್ ಅಸ್ಲಂ ಪಾಷಾ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ನರಸಿಂಹರಾಜು, ವಿವಿಧ ಸಂಘಟನೆಗಳ ಮುಖಂಡರಾದ ನೇತಾಜಿ ಶ್ರೀಧರ್, ರಾಕ್‌ಲೈನ್ ರವಿಕುಮಾರ್, ಸೋಮಶೇಖರ್, ಅರುಣ್ ಕೃಷ್ಣಯ್ಯ, ಅರುಣ್‌ಕುಮಾರ್, ರವೀಂದ್ರ, ಜಿಯಾ, ಇಸ್ಮಾಯಿಲ್, ಟಿ.ಕೆ. ನರಸಿಂಹಮೂರ್ತಿ, ಎ.ಶ್ರೀನಿವಾಸ್, ಜಹಂಗೀರ್ ರವೀಶ್, ಟಿ.ಹೆಚ್. ಬಾಲಕೃಷ್ಣ, ನಟರಾಜು, ಒಬೇದುಲ್ಲಾ, ತೋವಿನಕೆರೆ ಬಸವರಾಜು, ಶಿವಪ್ರಸಾದ್, ಅರವಿಂದ್, ಡ್ಯಾಗೇರಹಳ್ಳಿ ವಿರೂಪಾಕ್ಷ, ಗೂಳೂರು ಕೃಷ್ಣೇಗೌಡ, ಚಂದ್ರಶೇಖರ್ ಮತ್ತಿತರು ಭಾಗವಹಿಸಿ ಮುನಾವರ್ ಪಾಷಾ ಅವರನ್ನು ಅಭಿನಂದಿಸಿ ಶುಭಕೋರಿದರು.
Kshetra Samachara
03/06/2026 09:44 am