ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ರೈತರ ಮುಖದಲ್ಲಿ ಮಂದಹಾಸ ತಂದ ಮಳೆ

ಶಿರಹಟ್ಟಿ: ರಾಜ್ಯದಲ್ಲಿ ಇನ್ನೇನು ಮುಂಗಾರು ಹಂಗಾಮು ಶುರುವಾಗಿದ್ದು, ಆದರೆ ಮಳೆರಾಯ ಬಾರದೇ ಇರುವುದರಿಂದ ನಾಡಿನ ರೈತ ಸಮುದಾಯದವು ಸ್ವಲ್ಪ ಚಿಂತೆಗಿಡಾಗಿತ್ತು. ಆದರೆ ಜೂನ್ ಮೊದಲ ವಾರದಲ್ಲಿ ಅಲ್ಲಲ್ಲಿ ಕೆಲವು ಕಡೆ ಮಳೆಯಾಗುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ರೈತಾಪಿ ವರ್ಗವು ಜಮೀನನ್ನು ಬಿತ್ತನೆ ಕಾರ್ಯಕ್ಕೆ ಬೇಕಾಗುವ ರೀತಿಯಲ್ಲಿ ಹದಮಾಡಿ ಇಷ್ಟು ದಿನ ಮಳೆ ಬರುವ ದಾರಿಯನ್ನು ಕಾಯುತ್ತ ಕುಳಿತಿದ್ದರು ಅವರ ಕಾಯುವಿಕೆಗೆ ಇಂದು ಪಟ್ಟಣದಲ್ಲಿ ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಮತ್ತೆ ನಾಳೆಯಿಂದ ನಾವೆಲ್ಲ ಬಿತ್ತನೆಯ ಕಾರ್ಯ ಚಟುವಟಿಕೆಯಲ್ಲಿ ತೊಡಗುತ್ತೇವೆ ಎಂದು ಪಟ್ಟಣದ ರೈತರೊಬ್ಬರು ಹೇಳಿದರು.

Edited By : PublicNext Desk
Kshetra Samachara

Kshetra Samachara

03/06/2026 03:29 pm

Cinque Terre

8.92 K

Cinque Terre

0