ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ರೈತರು ಮುಂದಿನ ದಿನಗಳಲ್ಲಿ ಬರಲಿರುವ ಬರವನ್ನು ಎದುರಿಸಲು ಸಜ್ಜಾಗಿ - ಸ್ಫೂರ್ತಿ ಜಿ.ಎಸ್

ಶಿರಹಟ್ಟಿ: ಖೇತ್ ಬಚಾವೋ ಅಭಿಯಾನ ಅತ್ಮ ಯೋಜನೆಯಡಿಲ್ಲಿ ಕಿಸಾನ ಗೋಷ್ಠಿ ಮತ್ತು ಮರುಭೂಮಿಕರಣ ಹಾಗೂ ಬರ ತಡೆಗಟ್ಟುವಿಕೆ ವಿಶ್ವ ದಿನ ಆಚರಣೆಯನ್ನು ಬುಧವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಮ್ ಸಿ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.

ಈ ವೇಳೆಯಲ್ಲಿ ಶ್ರೀಮತಿ ಸ್ಫೂರ್ತಿ ಜಿ.ಎಸ್. ಮಾನ್ಯ ಉಪ ಕೃಷಿ ನಿರ್ದೇಶಕರು ಗದಗ ಇವರು ಮಾತನಾಡುತ್ತಾ ಮರುಭೂಮಿಕರಣ ತಡೆಗಟ್ಟುವಿಕೆ ಹಾಗೂ ಬರ ತಡೆಗಟ್ಟುವಿಕೆ ಕುರಿತು ಮಾತನಾಡಿ ರೈತರಿಗೆ ತಮ್ಮ ಜಮೀನಿನಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಬರ ಎದುರಿಸಲು ಸಜ್ಜಾಗಬೇಕೆಂದು ಹೇಳಿದರು.

ಇದೇ ಸಮಯದಲ್ಲಿ 2025-26 ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಲಾಯಿತು.

ಸಭೆ ಅಧ್ಯಕ್ಷತೆ ವಹಿಸಿದ ಮಾನ್ಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಚೇತನಾ ಪಾಟೀಲ ಮಾತನಾಡುತ್ತಾ ರೈತರು ಸಾಧ್ಯವಾದಷ್ಟು ಸಾವಯವ ಕೃಷಿಯತ್ತ ಆಸಕ್ತಿ ತೋರಿಸುವದು ಇಂದು ಅತೀ ಅವಶ್ಯವಾಗಿದೆ. ರಾಸಾಯನಿಕ ಗೊಬ್ಬರ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆಯು ಹಾಳಾಗುತ್ತಿದ್ದು, ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಮುಂದುವರೆದು ಮುಂದಿನ ತಲೆಮಾರಿಗೆ ನಾವು ಫಲವತ್ತಾದ ಭೂಮಿ ಒದಗಿಸಲು ಇಂದಿನಿಂದಲೇ ಕಾರ್ಯೋನ್ಮುಖರಾಗುವುದು ಒಳಿತು ಎಂದು ಹೇಳಿದರು.

ನಂತರ ಎಲ್ಲ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಂಡು ಇಲಾಖೆಯೊಂದಿಗೆ ಸಹಕರಿಸಿ ಅಗತ್ಯಕ್ಕೆ ಅನುಗುನವಾಗಿ ತಮಗೆ ಬೇಕಾಗಿರುವ ಯೂರಿಯಾ ರಸಗೊಬ್ಬರ ಎಫ್‌ಐಡಿ ಮೂಲಕವೇ ಪಡೆಯಬೇಕು ಎಂದು ಹೇಳಿದರು.

ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶ್ರೀ ಎನ್.ಎಚ್.ಬಂಡಿ ಮಾತನಾಡಿ ಸಾವಯವ ಪದ್ಧತಿಯಲ್ಲಿ ಕೃಷಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಮತ್ತು ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗಿ ಮಣ್ಣು ರಾಸಾಯನಿಕಗಳಿಂದ ಮುಕ್ತಗೊಳ್ಳಲು ಸಹಕಾರಿಯಾಗುತ್ತದೆ, ರೈತರು ನೇರ ರಸಗೊಬ್ಬರ ಬಳಸುವ ಬದಲಾಗಿ ಕಾಂಪೋಸ್ಟ ರಸಗೊಬ್ಬರ ಬಳಸುವುದರಿಂದ ಬೆಳೆಗೆ ಬೇಕಾದ ಅವಶ್ಯಕ ಪ್ರಾಥಮಿಕ ಪೋಷಕಾಂಶ ಒದಗಿಸಲಾಗುತ್ತದೆ ಎಂದರು.

ಬಸವರಾಜ ನಾವಿ ಅವರು ಸಭೆಯಲ್ಲಿ ಸೇರಿದ ರೈತರಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿ ಬಗ್ಗೆ ಸುಧೀರ್ಘವಾಗಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮೋಹನ್ ಗುತ್ತೆಮ್ಮನವರ,ಶಿವಕುಮಾರ ಕಾಶಪ್ಪನವರ ಸಹಾಯಕ ಕೃಷಿ ನಿರ್ದೇಶಕರು, ಚಂದ್ರಶೇಖರಗೌಡ, ಎಸ್.ಎನ್. ಕೃಷಿ ಅಧಿಕಾರಿ,ಮಂಜುನಾಥ ಭರಮಗೌಡ್ರ ಆತ್ಮ ಯೋಜನಾ ನಿರ್ದೇಶಕರು, ಆರ್.ಸಿ.ಚಾಕಲಬ್ಬಿ ಕೃಷಿ ಅಧಿಕಾರಿ,ಶ್ರ ಎಮ್.ಎಸರ.ಪೂಜಾ‌ರ್ ಬಿ.ಟಿ.ಎಮ್ ಅತ್ಮ.ಡಿ.ಕೆ.ಅಚಲಕರ್,ಎ.ಟಿ.ಎಮ್ ಆತ್ಮ ಹಾಗೂ ಶಿರಹಟ್ಟಿ ತಾಲೂಕಿನ ಕೃಷಿಕ ಸಮಾಜ ಅಧ್ಯಕ್ಷರು ನೀಲನಗೌಡ ಪಾಟೀಲ, ಶ್ರೀನಿವಾಸ ಅಳವಂಡಿ, ಅಶೋಕ ಕಪ್ಲಿ, ಮಹೇಶ ಬಡ್ನಿ, ಮತ್ತು ತಾಲೂಕಿನ ವಿವಿಧ ಗ್ರಾಮಗಳ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

18/06/2026 04:57 pm

Cinque Terre

3.26 K

Cinque Terre

0