ಶಿರಹಟ್ಟಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶಿರಹಟ್ಟಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.
ಪಟ್ಟಣದ ನೆಹರು ವೃತ್ತದ ಬಳಿ ಬುಧವಾರ ಸಂಜೆ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನೂತನ ಮುಖ್ಯಮಂತ್ರಿಗೆ ಹಾಗೂ ಸ್ಥಳೀಯ ನಾಯಕಿ ಸುಜಾತಾ ದೊಡ್ಡಮನಿ ಅವರಿಗೆ ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಘವೇಂದ್ರ ದೊಡ್ಡಮನಿ, ಮಾಬುಸಾಬ್ ಲಕ್ಷ್ಮೇಶ್ವರ,ಅಶ್ರಥ ಡಾಲಾಯತ್ ಮಲ್ಲಪ್ಪ ಹುಯಿಲಗೋಳ,ಉದಯ್ ಕುಮಾರ್ ಕುಂಡಿ,ಸಂಜು ರೆಡ್ಡಿ ವೆಂಕರೆಡ್ಡಿ,ನಿಂಗರಾಜ್ ಪಾಟೀಲ್,ಮುತ್ತು ಮುಂಡವಾಡ, ಅಜರ್ ಹೆಸರೂರ, ಮಂಜು ದೇಸಳ್ಳಿ, ಶೊಕತ್ತಲಿ ಮನಿಯರ್, ವಿಶ್ವೇಶ್ ಕುಬಿಹಾಳ,ದೇವಪ್ಪ ಕಲ್ಯಾಣಿ,ರುದ್ರಗೌಡ ಪಾಟೀಲ್,ಈರಣ್ಣ ಕೋಟಿ,ಗಲೀಬ್ ಸಾಬ್ ಅಂಗಡಿ,ಗುಡುಸಾಬ ಜೋರ್ಗಸ್ತಿ, ದಾವಲಸಾಬ್ ಟಕ್ಕೆದ, ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಎಲ್ಲಾ ಸದಸ್ಯರು ಹಾಜರಿದ್ದರು.
Kshetra Samachara
03/06/2026 08:27 pm
LOADING...