ಶಿರಹಟ್ಟಿ: ಉತ್ತರ ಕರ್ನಾಟಕ ಭಾಗದ ಹಿರಿಯ ಕಾಂಗ್ರೆಸ್ ನಾಯಕ, ಶಾಸಕ ಹಾಗೂ ಜನಪ್ರಿಯ ನಾಯಕರಾಗಿರುವ ಎಚ್. ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಫಕ್ಕೀರೇಶ ನಡುವಿನಕೇರಿ ಆಗ್ರಹಿಸಿದ್ದಾರೆ.
ಪಾಟೀಲರು ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಸದಾ ಬದ್ಧರಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷಕ್ಕೆ ಕಷ್ಟ ಬಂದಾಗಲೂ ನಿಷ್ಠೆಯಿಂದ ಪಕ್ಷದ ಪರವಾಗಿ ನಿಂತು ಸಂಘಟನೆಯನ್ನು ಬಲಪಡಿಸಿದ್ದಾರೆ. ಅವರ ರಾಜಕೀಯ ಅನುಭವ, ಆಡಳಿತಾತ್ಮಕ ಜ್ಞಾನ, ಪ್ರಾಮಾಣಿಕತೆ ಮತ್ತು ಜನಸೇವೆಯ ಬದ್ಧತೆಯನ್ನು ಗಮನಿಸಿ ಸಚಿವ ಸ್ಥಾನ ನೀಡಬೇಕು ಎಂದು ಫಕ್ಕೀರೇಶ ನಡುವಿನಕೇರಿ ಮನವಿ ಮಾಡಿದರು.
ಎಚ್. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವುದರಿಂದ ಉತ್ತರ ಕರ್ನಾಟಕದ ಜನರ ಆಶಯಗಳಿಗೆ ಗೌರವ ದೊರೆಯುವುದರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನವ ಚೈತನ್ಯ, ಉತ್ಸಾಹ ಮತ್ತು ವಿಶ್ವಾಸ ಮೂಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Kshetra Samachara
08/06/2026 08:31 pm
LOADING...