ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಮತದಾರರ ಪಟ್ಟಿ : ಪ್ರಜಾಪ್ರಭುತ್ವದ ಆಧಾರ, ಪಾರದರ್ಶಕತೆಗೆ ತಹಶೀಲ್ದಾರ್ ಕರೆ

ಶಿರಹಟ್ಟಿ: ಮತದಾರರ ಪಟ್ಟಿಯು ಚುನಾವಣೆ ಪ್ರಕ್ರಿಯೆಯ ಮೂಲಾಧಾರ ಆಗಿರುವುದರಿಂದ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ರಾಘವೇಂದ್ರ ರಾವ್ ಹೇಳಿದರು.

ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಶುಕ್ರವಾರ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಆಡಳಿತದ ವತಿಯಿಂದ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಿಎಲ್‌ ಮತ್ತು ಬಿಎಲ್‌ಎ ಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ವೇಳೆಯಲ್ಲಿ ಸುಜಾತಾ ದೊಡ್ಡಮನಿ, ಶಂಕರ ಮರಾಠೆ ಮಾತನಾಡುತ್ತಾ. ಅಧಿಕಾರಿಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಅರ್ಹ ಮತದಾರರ ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಮೃತರನ್ನು ಪಟ್ಟಿಯಿಂದ ಕೈಬಿಡುವುದು. ಇನ್ನಿತರ ವಿಶೇಷಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಪರಿಶುದ್ಧವಾದ ಮತದಾರರ ಪಟ್ಟಿ ತಯಾರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕೆ. ರಾಘವೇಂದ್ರ ರಾವ್, ಬಿಜೆಪಿ ಮುಖಂಡ ಶಂಕರ ಮರಾಠ, ಎಚ್ . ಡಿ. ಮಾಗಡಿ, ನಾಗರಾಜ ಲಕ್ಕುಂಡಿ. ತಿಮ್ಮರಡ್ಡಿ ಮರಡ್ಡಿ, ಅಕ್ಬರ ಯಾದಗಿರಿ, ಶಿರಸ್ತೇದಾರ್ ಸಂತೋಷ ಆಸ್ಕಿ, ಕಂದಾಯ ನಿರೀಕ್ಷಕ ಬಸವರಾಜ ಕಾಂತ್ರಾಳ, ತಾಲೂಕು ಮಾಸ್ಟರ್ ಟ್ರೇನರ್ ಕೆ. ಎಚ್. ಹೊಂಬಳಮಠ ಮುಂತಾದವರು ಇದ್ದರು.

Edited By : Manjunath H D
PublicNext

PublicNext

07/06/2026 04:17 pm

Cinque Terre

10.98 K

Cinque Terre

0

ಸಂಬಂಧಿತ ಸುದ್ದಿ