ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ನೀರಿಗಾಗಿ ಕೊಡ ಹಿಡಿದು ಪಟ್ಟಣ ಪಂಚಾಯಿತಿಗೆ ಬಂದ ಸಾರ್ವಜನಿಕರು

ಶಿರಹಟ್ಟಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ವಾರ್ಡ್ ಒಂದರಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ, ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇಂದು ಮಹಿಳೆಯರು ಕೊಡಗಳ ಸಮೇತ ಪಟ್ಟಣ ಪಂಚಾಯಿತಿಗೆ ಬಂದು ಮನವಿ ಸಲ್ಲಿಸಿದ್ದಾರೆ.

ಪಟ್ಟಣದ 16 ನೇ ವಾರ್ಡಿನಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಬಾರದೆ ಇರುವುದರಿಂದ ಬಹಳ ತೊಂದರೆ ಆಗಿದೆ, ಆದ ಕಾರಣ ನಾವು ಈಗ ಶಾಂತಿಯಿಂದ ಬಂದು ಮನವಿಯನ್ನು ಕೊಟ್ಟಿದ್ದೇವೆ ಅಲ್ಲದೆ ಈ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಲ್ಲಪ್ಪ, ಪರಸಪ್ಪ, ಭರಮಪ್ಪ, ದುರಗಪ್ಪ, ಹನಮಂತ, ಇಸ್ಮಾಯಿಲ್, ಕವಿತಾ, ಮಮತಾಜಬಿ ಗೌರಮ್ಮ, ಲಕ್ಷ್ಮಿ, ಮಂಜುಳಾ, ಇನ್ನೂ ಅನೇಕರು ಇದ್ದರು.

Edited By :
PublicNext

PublicNext

15/06/2026 04:49 pm

Cinque Terre

10.35 K

Cinque Terre

0

ಸಂಬಂಧಿತ ಸುದ್ದಿ