ಶಿರಹಟ್ಟಿ: ನಮ್ಮ ಶಾಲೆಯ ಸಮಯಕ್ಕೆ ಬಸ್ ಬಿಡಿ ಎಂದು ಈಗಾಗಲೇ ಹಲವಾರು ಬಾರಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ನಾವೇ ಬಂದು ಬಸ್ ನಿಲ್ಲಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದರು.
ಹೌದು.... ನಾವು ಈಗ ಹೇಳುತ್ತಿರುವುದು ತಾಲೂಕಿನ ಕುಸಲಾಪುರ ಗ್ರಾಮದ ವಿದ್ಯಾರ್ಥಿಗಳ ಕಥೆಯಾಗಿದೆ. ಅಧಿಕಾರಿಗಳಿಗೆ ಎಷ್ಟೇ ಹೇಳಿದರು ಬಸ್ ಬಾರದಿದ್ದ ಕಾರಣಕ್ಕೆ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣಕ್ಕೆ ಬಂದು ಬಸ್ ಬಂದ್ ಮಾಡಿದರು.
ನಂತರ ಅಧಿಕಾರಿಗಳು ಬಂದು ಮೂರು ದಿನಗಳ ಕಾಲಾವಕಾಶ ತೆಗೆದುಕೊಂಡರು ಅಲ್ಲಿಗೆ ವಿದ್ಯಾರ್ಥಿಗಳು ಬಂದ್ ವಾಪಸ್ ಪಡೆದರು.
PublicNext
19/06/2026 05:10 pm
LOADING...