ವಿಜಯಪುರ: ಪಾದಚಾರಿ ಮಹಿಳೆಯ ಮೇಲೆ ಟಿಪ್ಪರ್ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ನಗರದ ಇಂಡಿ ರಸ್ತೆಯ ರಾಜ ಭವನ ಬಳಿ ದುರ್ಘಟನೆ ಸಂಭವಿಸಿದೆ. ಮಹಿಳೆ ತಲೆಯ ಮೇಲೆ ಟಿಪ್ಪರ್ ಚಕ್ರಗಳು ಹರಿದಿದ್ದು ತಲೆ ಜಜ್ಜಿ ಹೋಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆ ಯಾರು ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
04/06/2026 11:08 am
LOADING...