ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಆರೋಪಿಗೆ ಫೋನ್ ಕೊಟ್ಟ ಪೊಲೀಸ್... ಕರ್ತವ್ಯ ಲೋಪ ಎಸಗಿದ ಅಧಿಕಾರಿ..

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಕಳೆದ ಮೇ 29 ರಂದು ಗೋವಿಂದಪುರದಲ್ಲಿ ಜಮೀನು ವಿವಾದ ಹಿನ್ನೆಲೆ ನಡೆದಿದ್ದ ಭೀಕರ ಹತ್ಯಾಕಾಂಡ ಪ್ರಕರಣಕ್ಕೆ ಸಂಭವಿಸಿದಂತೆ ಗುರುವಾರ ಮತ್ತೆ ಪ್ರಮುಖ ಆರೋಪಿ ಸೇರಿ 6 ಜನರನ್ನು ಬಂಧಿಸಲಾಗಿದೆ.

ಈ ವೇಳೆ ಬಂಧಿತ ಆರೋಪಿಗಳ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಪೊಲೀಸ್ ವಾಹನದಿಂದ ಆರೋಪಿ ಕೆಳಗಿಳಿಯುವ ವೇಳೆ ಫೋನ್ ನಲ್ಲಿ ಮಾತನಾಡುತ್ತಿದ್ದು ಕೆಳಗಿಳಿಯುತ್ತಿರುವ ಆರೋಪಿಗೆ ತನ್ನ ಫೋನ್ ನೀಡಿ ಸೈಡ್ ಗೆ ಹೋಗಿ ಮಾತನಾಡುವಂತೆ ಸನ್ನೆ ಮಾಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾನೆ.

ಗೋವಿಂದಪುರದಲ್ಲಿ ಜಮೀನು ವಿವಾದ ಹಿನ್ನೆಲೆ ನಡೆದಿದ್ದ ಭೀಕರ ಹತ್ಯಾಕಾಂಡದಲ್ಲಿ ಚಂದ್ರಕಾಂತ ನಿರಾಳೆ ಆತನ ಮಕ್ಕಳಾದ ಸಮರ್ಥ ಹಾಗೂ ರಾಹುಲ್‌, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ ಹಾಗೂ ಶಬ್ಬಿರ್‌ ಅತ್ತಾರ್‌ ಭೀಕರವಾಗಿ ಕೊಲೆ ಮಾಡಲಾಗಿತ್ತು.

ಜೂನ್ 1 ರಂದು ಪ್ರಮುಖ ಆರೋಪಿ ಕಲ್ಲನಗೌಡ ಪಾಟೀಲ್ (49) ಶಂಕ್ರೆಪ್ಪ, ಮಾದೇವ ಅರಕೇರಿ (33) ಅಪ್ಪಾಸಾಬ @ ಕಿಶನ್‌, ಶಂಕರ ಭೋವಿ (56) ಸತ್ಯೆಪ್ಪ, ಜಕ್ಕಪ್ಪ ಬಿರಾದಾರ( 46) ಸುಲ್ತಾನ, ಮಾದೇವ ಬಿರಾದಾರ, (24) ಮಹೇಶ ತಂ. ಬೆಳ್ಳೆಣ್ಣಿ ಬಿರಾದಾರ, (25 ) ಸೇರಿದಂತೆ ಒಟ್ಟು 18 ಆರೋಪಿಗಳ ಬಂಧಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಸದ್ಯ ರಾಜ್ಯದಲ್ಲಿ ಸುದ್ದಿಯಾದ ಆರು ಜನರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪೊಲೀಸ್ ಫೋನ್ ನೀಡಿರುವುದು ಘಟನೆ ಬೆಳಕಿಗೆ ಬಂದಿದ್ದು ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವ ಕ್ರಮ ಕೈಗೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ನೆಕ್ಸ್ಟ್ ವಿಜಯಪುರ

Edited By : Manjunath H D
PublicNext

PublicNext

04/06/2026 03:35 pm

Cinque Terre

12.99 K

Cinque Terre

0