ಕೋಲಾರ: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಮರಳಿ ಆರಂಭವಾಗಿದ್ದು, ಹಲವೆಡೆ ಶಾಲೆಗಳಲ್ಲಿ ಮಕ್ಕಳನ್ನು ಕರೆ ತರೋಕೆ ಸರ್ಕಸ್ ಮಾಡಲಾಗುತ್ತಿದೆ. ಸದ್ಯ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ವಿಶೇಷವಾಗಿ ಸ್ವಾಗತ ಕೋರಿದ್ದಾರೆ. ಕೋಲಾರ ಜಿಲ್ಲೆ ಕೆ. ಜಿ. ಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಹಂಗಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ವಿಭಿನ್ನವಾಗಿ ಮಕ್ಕಳನ್ನ ತರಗತಿಯ ಕೊಠಡಿಗೆ ಬರಮಾಡಿಕೊಂಡಿದ್ದಾರೆ, ಶಾಲೆಯನ್ನ ಬಣ್ಣ ಬಣ್ಣದ ವಸ್ತುಗಳಿಂದ ಸಿಂಗಾರ ಮಾಡಿ, ಮೇಳ ವಾದ್ಯಗಳೊಂದಿಗೆ, ಪೂರ್ಣಕುಂಭದೊಂದಿಗೆ ಊರೆಲ್ಲಾ ಮೆರವಣಿಗೆ ತೆರಳಿದ್ರು, ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹೂವಿನ ಹಾರ ಹಾಕಿ ಸಿಹಿ ನೀಡಿದ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದ್ದು, ಶಾಲೆಗೆ ಬಂದ ಮಕ್ಕಳು ಪುಳಕಿತರಾದರು.
PublicNext
04/06/2026 01:00 pm
LOADING...