ಕೋಲಾರ : ಸೇನೆಯಲ್ಲಿ ಸತತ 16 ವರ್ಷಗಳ ಕಾಲ ಸೇವೆ ಸಲ್ಲಿಸಿ, ತವರಿಗೆ ವಾಪಸ್ ಆದ, ಯೋಧನಿಗೆ ಸಂಬಂಧಿಕರು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ನಾಯಕ್ ಗುರು ಪ್ರಸಾದ್ ಅವರು, 2010 ರಲ್ಲಿ ಸೇನೆಗೆ ಸೇರಿದ್ದು, ಜಮ್ಮು ಕಾಶ್ಮೀರ ಸೇರಿ ಹಲವೆಡೆ ಸೇನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ನಿವೃತ್ತಿಯಾಗಿ ಬಂಗಾರಪೇಟೆ ರೈಲು ನಿಲ್ದಾಣಕ್ಕೆ ಆಗಮಿಸಿದ ಮಾಜಿ ಯೋಧನಿಗೆ ಕುಟುಂಬಸ್ಥರು ಟಮಟೆ ವಾದ್ಯಗಳಿಂದ ಸ್ವಾಗತ ಕೋರಿ, ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಮನೆಗೆ ಬರಮಾಡಿಕೊಂಡರು, ಮಾರ್ಗ ಮಧ್ಯೆ ಡಾ. ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ನಿವೃತ್ತ ಯೋಧ, ಯುವಕರು ಸೇನೆಗೆ ಸೇರುವ ಇಚ್ಛೆಯಿದ್ದರೆ, ದುಶ್ಚಟದಿಂದ ದೂರವಿರಿ, ಚೆನ್ನಾಗಿ ಓದಿ ಆಮೇಲೆ ಯೋಧರಾಗಿ ಎಂದು ಯುವ ಸಮೂಹಕ್ಕೆ ಸಂದೇಶ ನೀಡಿದ್ದಾರೆ.
PublicNext
04/06/2026 01:46 pm
LOADING...